News Karnataka Kannada
Thursday, May 02 2024
ಕ್ರೈಮ್

ಬಿಹಾರದಲ್ಲಿ ಅಕ್ರಮ ಮದ್ಯ ದುರಂತ: ಐವರು ಸಾವು

Five killed in Bihar after consuming illicit liquor
Photo Credit : News Kannada

ಪಾಟ್ನಾ: ಬಿಹಾರದ ಗೋಪಾಲ್ ಗಂಜ್ ಜಿಲ್ಲೆಯಲ್ಲಿ ಸಂಭವಿಸಿದ ಅಕ್ರಮ ಮದ್ಯಸೇವನೆಯಿಂದ ಕನಿಷ್ಠ ಐವರು ಸಾವನ್ನಪ್ಪಿದ್ದಾರೆ. ನಾಲ್ವರ ಮೃತದೇಹಗಳನ್ನು ಅವರ ಕುಟುಂಬಗಳು ಈಗಾಗಲೇ ಅಂತ್ಯಸಂಸ್ಕಾರ ಮಾಡಿದ್ದು, ಒಬ್ಬರ ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಕಳುಹಿಸಲಾಗಿದೆ.

ಜಿಲ್ಲೆಯ ಬೈಕುಂತ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಹ್ರಂಪುರ, ಸಿರ್ಸಾ, ಮಾನ್‌ಪುರ್ ಮತ್ತು ಬಾಮೊ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಸುರೇಶ್ ರಾಮ್, ಟಿಂಕು ರಾಮ್, ರೋಹಿತ್ ಶರ್ಮಾ, ಜಗ್ದು ರಾಯ್ ಮತ್ತು ಸಿಕಂದರ್ ಶಾ ಎಂದು ಗುರುತಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ ಜಿಲ್ಲಾಧಿಕಾರಿ ನವಲ್ ಕಿಶೋರ್ ”ಮೃತರು ಬೇರೆ ಬೇರೆ ಗ್ರಾಮಗಳವರಾಗಿದ್ದು, ಬೇರೆ ಬೇರೆ ಕಾರಣಗಳಿಂದ ಸಾವನ್ನಪ್ಪಿದ್ದಾರೆ. ಅವರಲ್ಲಿ ಒಬ್ಬರು ಪುಣೆಯಲ್ಲಿ ವಾಸವಿದ್ದು, ಇತ್ತೀಚೆಗೆ ಮನೆಗೆ ಬಂದಿದ್ದರು. ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು