ಛತ್ತೀಸ್ಗಢ: ಛತ್ತೀಸ್ಗಢದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಕ್ಷುಲ್ಲಕ ವಿಚಾರಕ್ಕೆ ಕೆಲ ಯುವಕರು ಯುವಕನೊಬ್ಬನನ್ನು ಕಾರಿನ ಕಿಟಕಿಯಲ್ಲಿ ಸಿಲುಕಿಸಿ ಸುಮಾರು ಎರಡು ಕಿಲೋ ಮೀಟರ್ ವರೆಗೆ ಎಳೆದೊಯ್ದ ಘಟನೆ ಛತ್ತೀಸ್ಗಢದ ದುರ್ಗ್ ನಗರದಲ್ಲಿ ನಡೆದಿದೆ.
ಯುವಕನ ಬೈಕ್ಗೆ ಕಾರು ಡಿಕ್ಕಿ ಹೊಡೆದಿತ್ತು. ಈ ವೇಳೆ ಯುವಕ ಹಾಗೂ ಕಾರು ಸವಾರರ ನಡುವೆ ವಾಗ್ವಾದ ನಡೆದಿದೆ. ಇಷ್ಟಕ್ಕೆ ಸಿಟ್ಟಾದ ಕಾರಿನಲ್ಲಿದ್ದ ಕೆಲ ಪುಂಡರು ಯುವಕನನ್ನ ಕಾರಿನ ಕಿಟಿಕಿಗೆ ಕಟ್ಟಿ, ಸುಮಾರು 2 ಕಿಲೋ ಮೀಟರ್ವರೆಗೆ ಕಾರು ಚಾಲನೆ ಮಾಡಿಕೊಂಡು ಹೋಗಿದ್ದಾರೆ. ಸದ್ಯ ಪೊಲೀಸರು ಕಾರು ಚಾಲಕ ಜಹೀರುದ್ದೀನ್ನನ್ನ ಬಂಧಿಸಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಯುವಕನನ್ನು ಕಾರಿನಲ್ಲಿ ಎಳದೊಯ್ಯತ್ತಿರುವ ದೃಶ್ಯ ವೈರಲ್ ಆಗಿದೆ.
#दुर्ग: हैवानियत की हदें पार, मामूली सी बात पर युवक को कार की विंडो में लटकाकर 3 KM तक भगाते रहे कार, रोकने पर भी नहीं रुके.#ChhattisgarhNews #durg # pic.twitter.com/yLcCP8Anb5
— chandan jha (@chandan_jha_11) December 19, 2023