ಆಗುಂಬೆ: ಕಾರೊಂದು ನೋಡ ನೋಡುತ್ತಿದ್ದಂತೆ ಹೊತ್ತಿ ಉರಿದ ಘಟನೆ ಆಗುಂಬೆ ಸಮೀಪದ ತಲ್ಲೂರಂಗಡಿಯಲ್ಲಿ ನಡೆದಿದೆ. ಕಾರಿನ ಎಂಜಿನ್ ಅತಿಯಾಗಿ ಬಿಸಿಯಾದ ಪರಿಣಾಮ ಬೆಂಕಿ ಹತ್ತಿಕೊಂಡಿದೆ ಎನ್ನಲಾಗಿದೆ. ತೀರ್ಥಹಳ್ಳಿ ಆಗುಂಬೆ ರಾಷ್ಟ್ರೀಯ ಹೆದ್ದಾರಿ ಮಧ್ಯಭಾಗದಲ್ಲಿ ಈ ಘಟನೆ ನಡೆದಿದೆ.
ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಕಾರು ಎಲ್ಲಿಯದ್ದು ಎಂಬ ಬಗ್ಗೆ ತಿಳಿದುಬಂದಿಲ್ಲ. ಈ ಘಟನೆಯಿಂದ ರಸ್ತೆಯಲ್ಲಿ ಕೆಲಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು.