ಗಾಜಾ,: ಇಸ್ರೇಲಿ ಮಿಲಿಟರಿ ಗಾಜಾ ನಗರದ ಅಲ್ ಕುದ್ಸ್ ಆಸ್ಪತ್ರೆ ಸಮೀಪ ದಾಳಿಯನ್ನು ಹೆಚ್ಚಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ನಮ್ಮ ಜನರಿಗೆ ಈಗ ಆಶ್ರಯವೇ ಇಲ್ಲ. ಆಸ್ಪತ್ರೆ ಸೇರಿದಂತೆ ಪ್ರತಿ ಸ್ಥಳಗಳ ಮೇಲೆ ಇಸ್ರೇಲಿ ಸೇನೆ ದಾಳಿ ನಡೆಸಿದೆ. ಶಾಲೆಗಳಲ್ಲಿ ಸಾವಿರಾರು ಜನರು ಆಶ್ರಯ ಪಡೆಯುತ್ತಿದ್ದಾರೆ. ಅಲ್ ಖುಡ್ಸ್ ಆಸ್ಪತ್ರೆಯ ಸುತ್ತಲಿನ ಪ್ರತಿಯೊಂದು ಕಟ್ಟಡವನ್ನು ಇಸ್ರೇಲ್ ಗುರಿಯಾಗಿಸಿಕೊಂಡಿದೆ ಎಂದು ಆಸ್ಪತ್ರೆ ನಿರ್ದೇಶಕರು ಹೇಳಿದ್ದಾರೆ.
ನಮ್ಮ ಆಸ್ಪತ್ರೆಯೊಳಗೆ 400 ಕ್ಕೂ ಹೆಚ್ಚು ರೋಗಿಗಳಿದ್ದಾರೆ. ಅವರನ್ನು ಸ್ಥಳಾಂತರಿಸುವುದು ಸಾಧ್ಯವೇ ಇಲ್ಲ. ಅವರನ್ನು ಸ್ಥಳಾಂತರಿಸುವುದು ಕೊಲ್ಲುವುದು ಎಂದೇ ಅರ್ಥ ಎಂದು ಅವರು ಹೇಳಿದ್ದಾರೆ.
ಅಲ್ಲದೆ ಈ ಮಾನವೀಯ ದುರಂತವನ್ನು ತಡೆಯಲು ತಕ್ಷಣವೇ ಮಧ್ಯಪ್ರವೇಶಿಸುವಂತೆ ಅಂತರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.
ಗಾಜಾ ನಗರದ ಆಸ್ಪತ್ರೆ ಮೇಲೆ ಇಸ್ರೇಲ್ ಸೇನೆ ದಾಳಿ
Photo Credit :
News Kannada
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.