News Karnataka Kannada
Friday, May 03 2024
ಕ್ರೈಮ್

ಮನಕಲುಕುವ ಘಟನೆ: 28 ದಿನಗಳ ಸಾಮೂಹಿಕ ಅತ್ಯಾಚಾರ

Girl raped by man responsible for child protection, wife joins wife in heinous act
Photo Credit : IANS

ಪಾಟ್ನಾ: ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ಆರು ಮಂದಿ 13 ವರ್ಷದ ಬಾಲಕಿಯನ್ನು ಅಪಹರಿಸಿ 28 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ನಡೆದಿದೆ.

ಆರೋಪಿಗಳು ಆಗಸ್ಟ್ 5 ರಂದು ಸಂಜೆ ಸಂತ್ರಸ್ತೆಯ ತಾಯಿಗೆ ಕರೆ ಮಾಡಿ ಸರಯಾ ಚೌಕ್‌ನಿಂದ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ.  ಸರಯಾ ಪೊಲೀಸ್ ಠಾಣೆ ವ್ಯಾಪ್ತಿಯ ಸಿಸ್ವಾನಿಯಾ ಗ್ರಾಮದ ಆರೋಪಿಗಳು ಜುಲೈ 9 ರಂದು ಕಾರಿನಲ್ಲಿ ಬಂದು ಮಗಳನ್ನು ಅಪಹರಿಸಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಲಿಖಿತ ದೂರಿನಲ್ಲಿ ತಿಳಿಸಿದ್ದಾರೆ.

ಜುಲೈ 9 ರಂದು, ನಾನು ಆರೋಪಿಯ ವಿರುದ್ಧ ಲಿಖಿತ ದೂರು ನೀಡಿದ್ದೇನೆ. ಆದರೆ ಜಿಲ್ಲಾ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಆಗಸ್ಟ್ 5 ರಂದು, ರಾತ್ರಿ 8 ಗಂಟೆಗೆ ಆರೋಪಿಯಿಂದ ನನಗೆ ಕರೆ ಬಂದಿದ್ದು, ನನ್ನ ಪುತ್ರಿಯನ್ನು ಸರಯಾ ಚೌಕ್‌ನಲ್ಲಿ ಬಿಟ್ಟಿದ್ದು, ಅಲ್ಲಿಂದ ಕರೆದುಕೊಂಡು ಹೋಗುವಂತೆ ತಿಳಿಸಿದ್ದರು. ನಾನು ಅಲ್ಲಿಗೆ ತೆರಳಿ ಪುತ್ರಿಯನ್ನು ಕರೆತಂದಿದ್ದೇನೆ ಎಂದು ತಿಳಿಸಿದ್ದಾರೆ.

ಸಂತ್ರಸ್ತ ಬಾಲಕಿಗೆ ಆರೋಪಿಗಳೊಂದಿಗೆ ಫೇಸ್‌ ಬುಕ್‌ ಮೂಲಕ ಪರಿಚಯವಾಗತ್ತು ಎನ್ನಲಾಗಿದೆ. ಜುಲೈ 9 ರಂದು ಆಕೆಯನ್ನು ಅಪಹರಿಸಿ ಆಕೆಯನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ 28 ದಿನಗಳವರೆಗೆ ಅತ್ಯಾಚಾರ ನಡೆಸಲಾಗಿತ್ತು. ಆರೋಪಿಗಳನ್ನು ಬಂಧಿಸಲು ಜಿಲ್ಲಾ ಪೊಲೀಸರು ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು