ಮುಂಬೈ: ದೇಶೀ ಕ್ರಿಕೆಟ್ನಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುವ ಸ್ಟಾರ್ ಬ್ಯಾಟರ್ ಸರ್ಫರಾಜ್ ಖಾನ್ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆ ಮೂಲದ ಯುವತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.
ಈ ವಿಚಾರವನ್ನು ಸ್ವತಃ ಸರ್ಫರಾಜ್ ತನ್ನ ಇನ್ಸ್ಟಾಗ್ರಾಮ್ನಲ್ಲಿ ಪತ್ನಿಯೊಂದಿಗಿರುವ ಫೋಟೋವನ್ನು ಹಂಚಿಕೊಳ್ಳುವುದರೊಂದಿಗೆ ಖಚಿತಪಡಿಸಿದ್ದಾರೆ. ಮದುವೆಯಲ್ಲಿ ಸರ್ಫರಾಜ್ ಕಪ್ಪು ಶೆರ್ವಾನಿ ಧರಿಸಿ ಮಿಂಚಿರುವ ಹಲವು ವೀಡಿಯೊ ಮತ್ತು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಸ್ಥಳೀಯ ಮಾಧ್ಯಮವೊಂದರೊಂದಿಗೆ ತಮ್ಮ ವಿವಾಹದ ಬಗ್ಗೆ ಮಾತನಾಡಿರುವ ಸರ್ಫರಾಜ್, ತನ್ನ ಮದುವೆಯನ್ನು ಕಾಶ್ಮೀರದಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಹಾಗಾಗಿ ಭಾನುವಾರದಂದು ಮದುವೆ ಕಾರ್ಯಕ್ರಮ ನಡೆದಿದ್ದಾರೆ ಎಂದಿದ್ದಾರೆ.
ವೈವಾಹಿಕ ಜೀನಕ್ಕೆ ಕಾಲಿರಿಸಿದ ಸರ್ಫರಾಜ್ ಅವರಿಗೆ ಕ್ರಿಸ್ ಗೇಲ್, ಸೂರ್ಯಕುಮಾರ್ ಯಾದವ್, ರುತುರಾಜ್ ಗಾಯಕ್ವಾಡ್, ಖಲೀಲ್ ಅಹ್ಮದ್, ಉಮ್ರಾನ್ ಮಲಿಕ್, ಸಿಕಂದರ್ ರಜಾ, ಮನ್ದೀಪ್ ಸಿಂಗ್ ಮತ್ತು ಭಾರತದ ಮಾಜಿ ಆಫ್ ಸ್ಪಿನ್ನರ್ ರಮೇಶ್ ಪೊವಾರ್ ಮದುವೆಯ ಶುಭಾಶಯ ಕೋರಿದ್ದಾರೆ.