ಸಿಂಪಲ್ ಆಗಿ ಮಾಡಿ ಚಿಕನ್ ನೂಡಲ್ ಸೂಪ್ ರೆಸಿಪಿ

ಸಣ್ಣ ಹಸಿವನ್ನು ತಣಿಸಲು ಫಟಾಫಟ್ ಅಂತ ಮಾಡಬಹುದಾದ ಸಿಂಪಲ್ ಚಿಕನ್ ನೂಡಲ್ ಸೂಪ್ ರೆಸಿಪಿಯನ್ನು ನೋಡೋಣ.

ಬೇಕಾಗುವ ಪದಾರ್ಥಗಳು:
ಚಿಕನ್ ಸ್ಟಾಕ್ – 3 ಕಪ್
ನೂಡಲ್ಸ್ – 400 ಗ್ರಾಂ
ಮೂಳೆಗಳಿಲ್ಲದ ಬೇಯಿಸಿದ ಚಿಕನ್ – 250 ಗ್ರಾಂ
ಸಿಪ್ಪೆ ಸುಲಿದು ಅರ್ಧಕ್ಕೆ ಹೆಚ್ಚಿಕೊಂಡ ಈರುಳ್ಳಿ – 1
ಸೆಲರಿ – 2 ಕಾಂಡಗಳು
ಉಪ್ಪು – ರುಚಿಗೆ ತಕ್ಕಷ್ಟು
ಕರಿಮೆಣಸಿನಪುಡಿ -ಸ್ವಾದಕ್ಕನುಸಾರ

ಮಾಡುವ ವಿಧಾನ: ಮೊದಲಿಗೆ ಒಂದು ಪಾತ್ರೆಯಲ್ಲಿ ಚಿಕನ್ ಸ್ಟಾಕ್ ಹಾಕಿ, ಅದಕ್ಕೆ ಈರುಳ್ಳಿ ಮತ್ತು ಸೆಲರಿ ಸೇರಿಸಿ ಹೆಚ್ಚಿನ ಉರಿಯಲ್ಲಿ ಕುದಿಸಿ.  ಈಗ ಅದಕ್ಕೆ ಚಿಕನ್ ಅನ್ನು ಚೂರುಗಳಾಗಿ ಕತ್ತರಿಸಿ ಸೇರಿಸಿಕೊಳ್ಳಿ. ಬಳಿಕ ನೂಡಲ್ಸ್ ಅನ್ನು ಸೇರಿಸಿ 8 ನಿಮಿಷ ಬೇಯಿಸಿಕೊಳ್ಳಿ. ಈಗ ಒಂದು ಸ್ಪೂನ್ ಸಹಾಯದಿಂದ ಈರುಳ್ಳಿ ಹಾಗೂ ಸೆಲರಿಯನ್ನು ತೆಗೆದು  ಉಪ್ಪು ಹಾಗೂ ಮೆಣಸಿನಪುಡಿಯನ್ನು ಸೇರಿಸಿ, ಮಿಶ್ರಣ ಮಾಡಿ 1-2 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿದರೆ  ಚಿಕನ್ ನೂಡಲ್ ಸೂಪ್ ಸವಿಯಲು ಸಿದ್ದ.

Ashika S

Recent Posts

ವಿದ್ಯುತ್ ಸಮಸ್ಯೆ ಪರಿಹರಿಸಲು ಬೆಸ್ಕಾಂನಿಂದ ವಾಟ್ಸಾಪ್ ನಂಬರ್ ಬಿಡುಗಡೆ

ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಪರಿಹರಿಸಲು ಬೆಸ್ಕಾಂ ಎಂಟು ಜಿಲ್ಲೆಗಳಿಗೆ ವಾಟ್ಸಾಪ್ ನಂಬರ್ ಬಿಡುಗಡೆ ಮಾಡಿದ್ದು, ಬೆಸ್ಕಾಂ ವ್ಯಾಪ್ತಿಯ ಜಿಲ್ಲೆಯ ಜನರು…

4 mins ago

ಎಸ್‌ಎಸ್‌ಎಲ್‌ಸಿ 2,3ನೇ ಪರೀಕ್ಷೆ ಬರೆಯುವವರಿಗೆ ಸ್ಪೆಷಲ್‌ ಕ್ಲಾಸ್‌ ಯೋಜನೆ

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು ಗುರುವಾರ (ಮೇ 9) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ…

7 mins ago

ಚುನಾವಣೆ ಮುಕ್ತಾಯದ ಬೆನ್ನಲ್ಲೇ ಆಕ್ಟಿವ್ ಆದ ಶಾಸಕ ಪ್ರಭು ಚವಾಣ್

ಲೋಕಸಭಾ ಚುನಾವಣೆ ಮುಕ್ತಾಯ ಬೆನ್ನಲ್ಲೇ ಬೀದರ್ ಜಿಲ್ಲೆ ಔರಾದ್ ಶಾಸಕ ಪ್ರಭು ಚವಾಣ್ ಕ್ಷೇತ್ರದಲ್ಲಿ ಆಕ್ಟಿವ್ ಆಗಿದ್ದಾರೆ. ಅನಾರೋಗ್ಯ ಕಾರಣ…

21 mins ago

ಶಾಸಕ ಇಕ್ಬಾಲ್‌ ಹುಸೇನ್‌ ವಿಡಿಯೋ ವೈರಲ್‌ ಕೇಸ್‌ : ಇಬ್ಬರ ಬಂಧನ

ಶಾಸಕ ಇಕ್ಬಾಲ್‌ ಹಸೇನ್‌ ಅವರು ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತೆ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದ ವಿಡಿಯೋ ವೈರಲ್‌ ಮಾಡಿದ್ದ ಆರೋಪದಡಿ…

23 mins ago

ಸುನೀತಾ ವಿಲಿಯಮ್ಸ್‌ ಗಗನಯಾತ್ರೆ ಮತ್ತೆ ಸ್ಥಗಿತ : ಮೇ 17ಕ್ಕೆ ಮುಂದೂಡಿಕೆ

ಭಾರತ ಮೂಲದ ವಿಶ್ವವಿಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಕೈಗೊಂಡಿರುವ ಗಗನಯಾತ್ರೆಯನ್ನು ಮತ್ತೆ ಮುಂದೂಡಲಾಗಿದೆ

45 mins ago

ನ್ಯೂಸ್ ಕರ್ನಾಟಕ ವರದಿಯ ಫಲಶೃತಿ : ಗೋಳೂರು ಗ್ರಾಮಕ್ಕೆ ತಹಶೀಲ್ದಾರ್ ಭೇಟಿ

ತಾಲ್ಲೂಕಿನ ಗೋಳೂರು ಗ್ರಾಮದ ಅಂಬೇಡ್ಕರ್ ಬಡಾವಣೆಯಲ್ಲಿ ಗಬ್ಬೆದ್ದು ನಾರುತ್ತಿರುವ ಚರಂಡಿ ಅವ್ಯವಸ್ಥೆಯ ಬಗ್ಗೆ ನ್ಯೂಸ್ ಕರ್ನಾಟಕ ವಾಹಿನಿಯಲ್ಲಿ ಸುದ್ದಿಯನ್ನು ಪ್ರಸಾರ…

57 mins ago