ಸಣ್ಣ ಹಸಿವನ್ನು ತಣಿಸಲು ಫಟಾಫಟ್ ಅಂತ ಮಾಡಬಹುದಾದ ಸಿಂಪಲ್ ಚಿಕನ್ ನೂಡಲ್ ಸೂಪ್ ರೆಸಿಪಿಯನ್ನು ನೋಡೋಣ.
ಬೇಕಾಗುವ ಪದಾರ್ಥಗಳು:
ಚಿಕನ್ ಸ್ಟಾಕ್ – 3 ಕಪ್
ನೂಡಲ್ಸ್ – 400 ಗ್ರಾಂ
ಮೂಳೆಗಳಿಲ್ಲದ ಬೇಯಿಸಿದ ಚಿಕನ್ – 250 ಗ್ರಾಂ
ಸಿಪ್ಪೆ ಸುಲಿದು ಅರ್ಧಕ್ಕೆ ಹೆಚ್ಚಿಕೊಂಡ ಈರುಳ್ಳಿ – 1
ಸೆಲರಿ – 2 ಕಾಂಡಗಳು
ಉಪ್ಪು – ರುಚಿಗೆ ತಕ್ಕಷ್ಟು
ಕರಿಮೆಣಸಿನಪುಡಿ -ಸ್ವಾದಕ್ಕನುಸಾರ
ಮಾಡುವ ವಿಧಾನ: ಮೊದಲಿಗೆ ಒಂದು ಪಾತ್ರೆಯಲ್ಲಿ ಚಿಕನ್ ಸ್ಟಾಕ್ ಹಾಕಿ, ಅದಕ್ಕೆ ಈರುಳ್ಳಿ ಮತ್ತು ಸೆಲರಿ ಸೇರಿಸಿ ಹೆಚ್ಚಿನ ಉರಿಯಲ್ಲಿ ಕುದಿಸಿ. ಈಗ ಅದಕ್ಕೆ ಚಿಕನ್ ಅನ್ನು ಚೂರುಗಳಾಗಿ ಕತ್ತರಿಸಿ ಸೇರಿಸಿಕೊಳ್ಳಿ. ಬಳಿಕ ನೂಡಲ್ಸ್ ಅನ್ನು ಸೇರಿಸಿ 8 ನಿಮಿಷ ಬೇಯಿಸಿಕೊಳ್ಳಿ. ಈಗ ಒಂದು ಸ್ಪೂನ್ ಸಹಾಯದಿಂದ ಈರುಳ್ಳಿ ಹಾಗೂ ಸೆಲರಿಯನ್ನು ತೆಗೆದು ಉಪ್ಪು ಹಾಗೂ ಮೆಣಸಿನಪುಡಿಯನ್ನು ಸೇರಿಸಿ, ಮಿಶ್ರಣ ಮಾಡಿ 1-2 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿದರೆ ಚಿಕನ್ ನೂಡಲ್ ಸೂಪ್ ಸವಿಯಲು ಸಿದ್ದ.