News Karnataka Kannada
Sunday, May 05 2024
ಅಡುಗೆ ಮನೆ

ರುಚಿಕರವಾದ ಕಬ್ಬಿನ ಹಾಲಿನ ಹಲ್ವ ಮಾಡುವ ಸರಳ ವಿಧಾನ

sugarcane-halwa
Photo Credit : Pixabay

ಬೇಸಿಗೆಯಲ್ಲಿ ಕಬ್ಬಿನ ಹಾಲು ಕುಡಿಯಲು ಎಲ್ಲರೂ ಇಷ್ಟ ಪಡುತ್ತಾರೆ. ಕಬ್ಬು ತಂಪು ಮತ್ತು ಸಿಹಿ ರುಚಿ ಎಲ್ಲರನ್ನು ಆಕರ್ಷಿಸುತ್ತದೆ. ಕಬ್ಬಿನಲ್ಲಿ ಕೊಬ್ಬು, ಕೊಲೆಸ್ಟ್ರಾಲ್, ಫೈಬರ್ ಮತ್ತು ಪ್ರೋಟೀನ್ ಸಂಪೂರ್ಣವಾಗಿ ಇರುವುದಿಲ್ಲ. ಆದರೆ ಸೋಡಿಯಂ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ ಮತ್ತು ಕ್ಯಾಲೋರಿಗಳು ಇದರಲ್ಲಿ ಹೇರಳವಾಗಿವೆ. ಬೇಸಿಗೆ ಕಾಲದಲ್ಲಿ ದೇಹವನ್ನು ನಿರ್ಜಲೀಕರಣದಿಂದ ಕಾಪಾಡಲು ಕಬ್ಬಿನ ಹಾಲು ತುಂಬಾ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ. ಅಷ್ಟೇ ಅಲ್ಲದೇ ದೇಹದಲ್ಲಿ ಶಕ್ತಿಯ ಮಟ್ಟ ಹೆಚ್ಚಿಸುತ್ತದೆ. ಕೇವಲ ಕಬ್ಬಿನ ಹಾಲು ಕುಡಿಯುವುದು ಮಾತ್ರವಲ್ಲ ಬದಲಾಗಿ ಇಂದು ನೀವು ಕಬ್ಬಿ ಹಾಲಿನಿಂದ ಹಲ್ವ ಮಾಡುವುದನ್ನು ತಿಳಿದುಕೊಳ್ಳಿ. . .

ಬೇಕಾಗುವ ಪದಾರ್ಥಗಳು 
ಕಬ್ಬಿನ ಹಾಲು- ಅರ್ಧ ಲೀಟರ್
ಅಕ್ಕಿ- ಒಂದು ಬಟ್ಟಲು
ಏಲಕ್ಕಿ ಪುಡಿ- ಸ್ವಲ್ಪ
ತುಪ್ಪ-ಸ್ವಲ್ಪ
ಬೆಲ್ಲ-ಸ್ವಲ್ಪ

ಮಾಡುವ ವಿಧಾನ 

ಅಕ್ಕಿಯನ್ನು ತೊಳೆದು ಸ್ವಲ್ಪ ನೀರಿನಲ್ಲಿ 2 ಗಂಟೆ ನೆನೆಸಿಡಿ. ನಂತರ ಇದನ್ನು ಅರ್ಧದಷ್ಟು ಕಬ್ಬಿನ ರಸದ ಜೊತೆ ಸೇರಿಸಿ.
ಏಲಕ್ಕಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ದಪ್ಪ ಬಾಣಲೆಗೆ ಮಿಶ್ರಣವನ್ನು ಹಾಕಿ ಉಳಿದ ಕಬ್ಬಿನ ರಸ ಸೇರಿಸಿ.
ಸ್ವಲ್ಪ ಬೆಲ್ಲ ಸೇರಿಸಿ ತಳ ಬಿಡುವವರೆಗೆ ಕಾಯಿಸಿ. ಬೆಂದ ನಂತರ ತುಪ್ಪ ಸವರಿದ ಪ್ಲೇಟ್‌ಗೆ ಹಾಕಿ ಸಮನಾಗಿ ಹರಡಿಕೊಳ್ಳಿ.
ತಣ್ಣಗಾದ ಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿದರೆ ಕಬ್ಬಿನ ಹಾಲಿನ ಹಲ್ವ ಸವಿಯಲು ಸಿದ್ಧ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು