ಬೇಸಿಗೆಯಲ್ಲಿ ಕಲ್ಲಂಗಡಿಗಳನ್ನು ತಿನ್ನುವುದು ದೇಹಕ್ಕೆ ಒಳ್ಳೆಯದು. ಆದರೆ ನೀವೊಮ್ಮೆ ಕಲ್ಲಂಗಡಿ ಹಣ್ಣಿನಿಂದ ರುಚಿಕರವಾದ ಬರ್ಫಿಯನ್ನು ಮಾಡಿ ಸವಿಯಿರಿ.
ಕಲ್ಲಂಗಡಿ ಹಣ್ಣಿನ ಬರ್ಫಿ ಮಾಡಲು ಬೇಕಾಗುವ ಪದಾರ್ಥಗಳು
ಕಲ್ಲಂಗಡಿ ಹಣ್ಣಿನ ಸಿಪ್ಪೆಯ ಬಿಳಿ ಭಾಗದ ತುರಿ – 2 ಬಟ್ಟಲು
ತೆಂಗಿನ ತುರಿ- 1 ಬಟ್ಟಲು
ರವೆ- ಅರ್ಧ ಬಟ್ಟಲು
ಸಕ್ಕರೆ- ಎರಡು ಬಟ್ಟಲು
ತುಪ್ಪ 2-3 ಚಮಚ
ಕಲ್ಲಂಗಡಿ ಹಣ್ಣಿನ ಬರ್ಫಿ ಮಾಡುವ ವಿಧಾನ.
ಮೊದಲು ಬಿಳಿ ಭಾಗದ ತುರಿಯನ್ನು ಬಾಣಲೆಗೆ ಹಾಕಿ ನೀರನ್ನು ಇಂಗಿಸಿ.ನಂತರ ಸಕ್ಕರೆ ಹಾಕಿ ಚೆನ್ನಾಗಿ ಮಗುಚಿ. ಪಾಕ ಬಂದು ಗಟ್ಟಿಯಾಗಬೇಕು
ಮಧ್ಯೆ ಮಧ್ಯೆ ತುಪ್ಪ ಸೇರಿಸಿ. ಸ್ವಲ್ಪ ಗಟ್ಟಿಯಾಗುತ್ತಿದ್ದಂತೆ ರವೆಯನ್ನು ಚೆನ್ನಾಗಿ ಹುರಿದು ಮಿಶ್ರಣ ಮಾಡಿ.
ತಳ ಬಿಡುವ ಹಂತಕ್ಕೆ ಬಂದಾಗ ಒಂದು ಚಮಚ ತುಪ್ಪ ಸೇರಿಸಿ. ಒಂದು ಪ್ಲೇಟಿಗೆ ಹಾಕಿ, ನಂತರ ಬೇಕಾದ ಆಕಾರಕ್ಕೆ ಕತ್ತರಿಸಿದರೆ ರುಚಿಕರವಾದ ಕಲ್ಲಂಗಡಿ ಹಣ್ಣಿನ ಬರ್ಫಿ ಸವಿಯಲು ಸಿದ್ಧ.