News Karnataka Kannada
Wednesday, May 15 2024
ಅಡುಗೆ ಮನೆ

ರುಚಿಕರವಾದ ‘ತೆಂಗಿನಕಾಯಿ ವಡೆ’ ಮಾಡುವುದು ಹೇಗೆ ಗೊತ್ತಾ ?

coconut-vada
Photo Credit : By Author

ತೆಂಗಿನಕಾಯಿ ದಕ್ಷಿಣ ಭಾರತದ ಬಹುತೇಕ ಆಹಾರದಲ್ಲಿ ನಿತ್ಯ ಬಳಕೆಯಾಗುತ್ತದೆ.ತೆಂಗಿನ ತಿರುಳಲ್ಲಿ ಗರಿಷ್ಠ ಪೌಷ್ಠಿಕತೆ, ನಾರಿನಲ್ಲಿ ಶ್ರೀಮಂತಿಕೆ ಇವೆ. ಜೀವಸತ್ವಗಳಾದ ಸಿ, ಇ, ಬಿ, ಬಿ3, ಬಿ5, ಹಾಗೂ ಬಿ6, ಖನಿಜಗಳಾದ ಕಬ್ಬಿಣ, ಸೆಲೇನಿಯಂ, ಸೋಡಿಯಂ, ಕ್ಯಾಲ್ಸಿಯಂ, ಮ್ಯಾಗ್ನೇಶಿಯಂ ಹಾಗೂ ರಂಜಕಗಳು ತೆಂಗಿನಲ್ಲಿ ತುಂಬಿವೆ. ತೆಂಗಿನಕಾಯಿ ಆರೋಗ್ಯಕರ ಕೊಬ್ಬು, ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳ ಅತ್ಯುತ್ತಮ ಮೂಲವಾಗಿದೆ. ಸಾಂಪ್ರದಾಯಿಕ ಭಾರತೀಯ ವೈದ್ಯಕೀಯ ಪದ್ದತಿಯಲ್ಲಿ ತೆಂಗಿನಕಾಯಿಗೆ ಸುದೀರ್ಘ ಇತಿಹಾಸವಿದೆ. ಇಷ್ಟು ಮಾತ್ರವಲ್ಲದೆ ತೆಂಗಿನ ಕಾಯಿಯಿಂದ ಕೆಲವು ಸಿಹಿ ತಿಂಡಿಗಳನ್ನು, ದೋಸೆ ತಯಾರಿಸಬಹುದು. ಇಂದು ನೀವು ತೆಂಗಿನಕಾಯಿಯಿಂದ ಮಾಡಬಹುದಾದ ವಡೆ ಬಗ್ಗೆ ತಿಳಿದುಕೊಳ್ಳಿ.

ಬೇಕಾಗುವ ಪದಾರ್ಥಗಳು
ಅಕ್ಕಿ ಹಿಟ್ಟು- 3 ಬಟ್ಟಲು
ತೆಂಗಿನಕಾಯಿ ತುರಿ- ಅರ್ಧ ಬಟ್ಟಲು
ಎಳ್ಳು- ಅರ್ಧ ಚಮಚ
ಜೀರಿಗೆ- ಅರ್ಧ ಚಮಚ
ಬೆಣ್ಣೆ- ಅರ್ಧ ಚಮಚ
ಅರಿಶಿನ- ಚಿಟಕೆಯಷ್ಟು
ಉಪ್ಪು- ರುಚಿಗೆ ತಕ್ಕಷ್ಟು
ಎಣ್ಣೆ- ಕರಿಯಲು ಅಗತ್ಯವಿರುವಷ್ಟು

ಮಾಡುವ ವಿಧಾನ 

ಅಕ್ಕಿ ಹಿಟ್ಟನ್ನು ನೀರು ಹಾಕಿ ಹದಕ್ಕೆ ಕಲೆಸಿಕೊಳ್ಳಬೇಕು, ನಂತರ ತೆಂಗಿನ ತುರಿ, ಎಳ್ಳು, ಜೀರಿಗೆ, ಉಪ್ಪು, ಅರಿಶಿನ ಹಾಕಿ ನಾದಬೇಕು.
ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ನಂತರ ನಾದಿದ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ತೆಳ್ಳಗೆ ತಟ್ಟಿ ಎಣ್ಣೆಯಲ್ಲಿ ಕರಿದರೆ ರುಚಿಯಾದ ತೆಂಗಿನಕಾಯಿ ವಡೆ ಸವಿಯಲು ಸಿದ್ದ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು