News Karnataka Kannada
Thursday, May 09 2024
ಅಡುಗೆ ಮನೆ

ರುಚಿಕರವಾದ ಬಾದಾಮಿ ಕಟ್ಲೆಟ್ ಮಾಡಿ ಸವಿಯಿರಿ

almond cutlet
Photo Credit : Pexels

ಬಾದಾಮಿಗಳಲ್ಲಿ ಪೋಷಕಾಂಶಗಳ ಭಂಡಾರವೇ ಇದೆ. ಬಾದಾಮಿ ನೆನೆಸಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು. ಹೃದಯದ ಆರೋಗ್ಯಕ್ಕೆ ಇವು ಪೂರಕವಾಗಿವೆ. ಮಧುಮೇಹಿಗಳಿಗೂ ಇದು ಒಳ್ಳೆಯದು. ಬಾದಾಮಿ ಬರ್ಫಿ, ಖೀರ್ ಎಲ್ಲದರ ರುಚಿ ನೋಡಿರ್ತಿರಿ. ಇಂದು ಸುಲಭವಾಗಿ ರುಚಿಕರವಾದ ಬಾದಾಮಿ ಕಟ್ಲೆಟ್ ಮಾಡುವ ವಿಧಾನವನ್ನು ತಿಳಿದುಕೊಳ್ಳಿ. . .

ಬೇಕಾಗುವ ಪದಾರ್ಥಗಳು

  • ಬಾದಾಮಿ ಪುಡಿ – 25 ಗ್ರಾಂ
  • ಒಣದ್ರಾಕ್ಷಿ – 25 ಗ್ರಾಂ
  • ಆಲೂಗಡ್ಡೆ- ಎರಡು (ಬೇಯಿಸಿದ್ದು)
  • ಪನೀರ್-2 ಚಮಚ (ಪುಡಿ ಮಾಡಿದ್ದು)
  • ಬ್ರೆಡ್ ಕ್ರಂಬ್ಸ್ – 2 ಚಮಚ
  • ಚಾಟ್ ಮಸಾಲ-ಒಂದು ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
  • ಹಸಿ ಮೆಣಸಿನಕಾಯಿ- 2
  • ಕಾರ್ನ್‌ಫ್ಲೋರ್ – ಮೂರು ಚಮಚ
  • ಗಸಗಸೆ-ಒಂದು ಚಮಚ
  • ಎಣ್ಣೆ-ಅಗತ್ಯಕ್ಕೆ ಬೇಕಾಗುವಷ್ಟು

ಮಾಡುವ ವಿಧಾನ

ದ್ರಾಕ್ಷಿ ಹಾಗೂ ಬಾದಾಮಿಯನ್ನು ರಾತ್ರಿಯಿಡಿ ನೆನೆಸಿಡಿ. ಬೆಳಿಗ್ಗೆ ಬಾದಾಮಿ ಸಿಪ್ಪೆ ತೆಗೆದಿಟ್ಟುಕೊಳ್ಳಿ. ಸಣ್ಣಸಣ್ಣದಾರಿ ಕತ್ತರಿಸಿಕೊಳ್ಳಿ.
ಇದಕ್ಕೆ ಚಾಟ್ ಮಸಾಲಾ ಹಾಕಿ.
ನಂತರ ಬೇಯಿಸಿದ ಆಲೂಗಡ್ಡೆ, ಪನೀರ್, ಬ್ರೆಡ್ ಕ್ರಂಬ್ಸ್, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

ನಂತರ ಈ ಮಿಶ್ರಣವನ್ನು ಸಣ್ಣ ಸಣ್ಣ  ಉಂಡೆಗಳಾಗಿ ಮಾಡಿ. ಕಾರ್ನ್‌ಫ್ಲೋರ್ ನೀರಿನಲ್ಲಿ ಕಲಸಿ. ತಯಾರಾದ ಕಟ್ಲೆಟ್‌ಗಳನ್ನು ಕಾರ್ನ್‌ಫ್ಲೋರ್ ದ್ರಾವಣದಲ್ಲಿ ಅದ್ದಿ.ಅದರ ಮೇಲೆ ಗಸಗಸೆ ಹಾಕಿ.

ಬಾಣಲೆಯಲ್ಲಿ ಎಣ್ಣೆ  ಬಿಸಿ ಮಾಡಿ ಅದರಲ್ಲಿ ಕಟ್ಲೆಟ್‌ಗಳನ್ನು ಹಾಕಿ ಕಂದು ಬಣ್ಣ ಬರುವವರೆಗೆ ಕರಿದರೆ ರುಚಿಕರವಾದ ಬಾದಾಮಿ ಕಟ್ಲೆಟ್ ಸವಿಯಲು ಸಿದ್ಧ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು