ಬೇಕಾಗುವ ಪದಾರ್ಥಗಳು
ಅಕ್ಕಿ ಹುಡಿ – ೧ಕೆ.ಜಿ
ತೆಂಗಿನಕಾಯಿ – ೧
ಕೊತ್ತಂಬರಿ – ೨ ಚಮಚ
ಜೀರಿಗೆ – ೨ ಚಮಚ
ಮೆಣಸಿನಕಾಯಿ ಪುಡಿ – ೨ಚಮಚ
ಬೆಣ್ಣೆ – ೨ ಲಿಂಬೆ ಗಾತ್ರದಷ್ಟು
ಕರಿಯಲು ಎಣ್ಣೆ
ಮಾಡುವ ವಿಧಾನ
ಅಕ್ಕಿ ಹುಡಿಯನ್ನು ಚನ್ನಾಗಿ ಜರಡಿ ಹಿಡಿದುಕೊಳ್ಳಿ.ಒಂದು ಮಿಕ್ಸಿ ಜಾರಿಗೆ ತುರಿದ ತೆಂಗಿನ ಕಾಯಿ, ಮೆಣಸಿನ ಕಾಯಿ ಹುಡಿ, ಕೊತ್ತಂಬರಿ, ಜೀರಿಗೆ, ಉಪ್ಪು ಹಾಕಿ ಸ್ವಲ್ಪ ನೀರು ಸೇರಿಸಿ ತೆಂಗಿನ ಕಾಯಿಯನ್ನು ರುಬ್ಬಿ ಅಕ್ಕಿ ಹುಡಿಯನ್ನು ಹಾಕಿ ಬೆಕಾದಷ್ಟು ನೀರು ಹಾಕಿ ಗಟ್ಟಿಯಾಗಿ ರುಬ್ಬಿಕೊಳ್ಳಿ ಜೊತೆಗೆ ಬೆಣ್ಣೆಯನ್ನು ಸೇರಿಸಿ ಕೈಯಲ್ಲಿ ಕಲಸಿ ಸಣ್ಣ ಸಣ್ಣ ಉಂಡೆ ಮಾಡಿ ಅದನ್ನು ಬತ್ತಿಯಂತೆ ಮಾಡಿ ಎರಡು ತುದಿಗಳನ್ನು ಸೇರಿಸಿ ಕಾದ ಎಣ್ಣೆಯಲ್ಲಿ ಕರಿದರೆ ರುಚಿರುಚಿಯಾದ ಕೋಡುಬಳೆ ಸವಿಯಲು ಸಿದ್ಧ.