ಸಿಹಿ ಪದಾರ್ಥಗಳಲ್ಲಿ ಅತ್ಯಂತ ಸುಲಭವಾಗಿ ತಯಾರಾಗುವ ಕುಂಬಳಕಾಯಿ ಹಲ್ವಾ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಪದಾರ್ಥಗಳು : ಕುಂಬಳಕಾಯಿ ತುರಿದಿದ್ದು-4 ಕಪ್, ಸಕ್ಕರೆ- 2 ಲೋಟ, ತುಪ್ಪ ಅರ್ಧಕಪ್, ಏಲಕ್ಕಿ, ಗೊಡಂಬಿ, ಜಾಯಿಕಾಯಿ ಪುಡಿ-ಸ್ವಲ್ಪ.
ಮಾಡುವ ವಿಧಾನ: ತುರಿದ ಕುಂಬಳಕಾಯಿಯನ್ನು ಬೇಯಿಸಿ ಸಕ್ಕರೆ ಬೆರೆಸಿ. ಈ ವೇಳೆ ಅದು ನೀರಾಗುತ್ತದೆ. ಸ್ವಲ್ಪ ತುಪ್ಪ ಹಾಕುತ್ತಾ ತಳ ಹಿಡಿಯದಂತೆ ಕಾಯಿಸಿ, ಸುಮಾರು ಅರ್ಧ ಗಂಟೆ ಕಳೆದಾಗ ಪಾಕವಾಗಿ ಕೈಗೆ ಅಂಟುವದಿಲ್ಲ. ತಳ ಬಿಟ್ಟು ಬರುತ್ತದೆ. ಬಟ್ಟಲಿಗೆ ಹಾಕಿ. ಏಲಕ್ಕಿ, ಗೊಡಂಬಿ, ಜಾಯಿಕಾಯಿ ಪುಡಿ ಎಲ್ಲವನ್ನು ಸೇರಿಸಿ ಈಗ ಸವಿಯಲು ಹಲ್ವಾ ಸಿದ್ಧ.