News Karnataka Kannada
Friday, May 10 2024
ಅಡುಗೆ ಮನೆ

ಇಂಡಿಯನ್ ಸ್ಟೈಲ್ ಪಾಸ್ತಾ ಬಟರ್ ಮಸಾಲ ಮಾಡುವುದು ಹೇಗೆ

Indian Style Pasta Butter Masala
Photo Credit : Pixabay

ಇಂಡಿಯನ್ ಸ್ಟೈಲ್ ಪಾಸ್ತಾ ಬಟರ್ ಮಸಾಲ ಮಾಡುವುದು ಹೇಗೆ ಎಂದು ನೋಡೋಣ.

ಬೇಕಾಗುವ ಪದಾರ್ಥಗಳು

  • ಪಾಸ್ತಾ-  1 ಬಟ್ಟಲು
  • ಬೆಣ್ಣೆ- ಸ್ವಲ್ಪ
  • ಶುಂಠಿ-ಬೆಳ್ಳುಳ್ಳಿ- 1 ಚಮಚ
  • ಟೊಮ್ಯಾಟೋ- 1
  • ಈರುಳ್ಳಿ-2
  • ಖಾರದ ಪುಡಿ- 1 ಚಮಚ
  • ಗರಂ ಮಸಾಲಾಪುಡಿ- 1 ಚಮಚ
  • ಜೀರಿಗೆ ಪುಡಿ- ಸ್ವಲ್ಪ
  • ಕಸೂರಿ ಮೇಥಿ- ಸ್ವಲ್ಪ
  • ಹಾಲು- 2 ಬಟ್ಟಲುು
  • ಎಣ್ಣೆ- 2 ಚಮಚ
  • ಕೊತ್ತಂಬರಿ ಸೊಪ್ಪು- ಸ್ವಲ್ಪ
  • ಉಪ್ಪು-ರುಚಿಗೆ ತಕ್ಕಷ್ಟು

ಮಾಡುವ ವಿಧಾನ. ಒಂದು ಪ್ಯಾನ್ ಗೆ ಸ್ವಲ್ಪ ಉಪ್ಪು, 4-5 ಹನಿ ಎಣ್ಣೆ, ಪಾಸ್ತಾ ಮತ್ತು ನೀರನ್ನು ಹಾಕಿ ಬೇಯಿಸಿ. ಪಾಸ್ತಾ ಬೆಂದ ನಂತರ ಅದರಲ್ಲಿರುವ ನೀರನ್ನು ಬಸಿದುಕೊಳ್ಳಿ.

ಇನ್ನೊಂದು ಪ್ಯಾನ್ ನಲ್ಲಿ ಎಣ್ಣೆಯನ್ನು ಹಾಕಿ ನಂತರ ಈರುಳ್ಳಿ, ಟೊಮೆಟೊ, ಶುಂಠಿ ಮತ್ತು ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ. ಅದು ತಣ್ಣಗಾದ ನಂತ್ರ ಮಿಶ್ರಣವನ್ನು ರುಬ್ಬಿಕೊಳ್ಳಿ. ಅದೇ ಪ್ಯಾನ್ ಗೆ ಸ್ವಲ್ಪ ಬೆಣ್ಣೆ ಹಾಕಿ ನಂತರ ರುಬ್ಬಿದ ಮಿಶ್ರಣ ಹಾಗೂ ಉಪ್ಪನ್ನು ಹಾಕಿ ಬೇಯಿಸಿ. ಬಳಿಕ ಖಾರದ ಪುಡಿ ಗರಂ ಮಸಾಲಾ ಪುಡಿ, ಜೀರಿಗೆ ಹಾಕಿ ಫ್ರೈ ಮಾಡಿ.

ಇದಕ್ಕೆ ಹಾಲನ್ನು ಹಾಕಿ ಮಿಶ್ರಣ ದಪ್ಪಗಾಗುವವರೆಗೆ ಬೇಯಿಸಿ. ನಂತರ ಅದಕ್ಕೆ ಕಸೂರಿ ಮೇಥಿ, ಕೊತ್ತಂಬರಿ ಸೊಪ್ಪು ಹಾಗೂ ಪಾಸ್ತಾ ಹಾಕಿ ಮಿಶ್ರಣ ಮಾಡಿದರೆ ರುಚಿಕರವಾದ ಪಾಸ್ತಾ ಬಟರ್ ಮಾಸಾಲ ಸವಿಯಲು ಸಿದ್ಧ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು