News Karnataka Kannada
Friday, May 03 2024
ಅಡುಗೆ ಮನೆ

ನೀವೇ ಮನೆಯಲ್ಲೇ ಮಾಡಿ ರುಚಿಯಾದ ಆಲೂಪರೋಟ

Make your own homemade alooparota
Photo Credit : By Author

ಸಾಮಾನ್ಯವಾಗಿ ಪರೋಟ ಎಂದ ತಕ್ಷಣ ಮೈದಾ ಹಿಟ್ಟಿನಿಂದ ತಯಾರಿಸುವ ಪರೋಟ ನೆನಪಾಗುತ್ತದೆ. ಈ ಪರೋಟವನ್ನು  ವಯಸ್ಸಾದವರಿಗೆ ಸೇವಿಸುವುದು ಕಷ್ಟವಾಗುತ್ತದೆ. ಆದರೆ ಆಲೂಪರೋಟವನ್ನು ಗೋಧಿ ಹಿಟ್ಟಿನಿಂದ ಮಾಡುವುದರಿಂದ ಜತೆಗೆ ಆಲೂಗೆಡ್ಡೆ, ಸೇರಿದಂತೆ ಮಸಾಲೆ ಪದಾರ್ಥಗಳು ಬೆರೆಯುವುದರಿಂದ ಸೇವಿಸಲು ರುಚಿಯಾಗಿಯೂ ಆರೋಗ್ಯಕ್ಕೆ ಹಿತಕರವೂ ಆಗಿರುತ್ತದೆ. ಹಾಗಾದರೆ ಆಲೂಪರೋಟ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಆಲೂಪರೋಟ ತಯಾರಿಗೆ ಬೇಕಾಗುವ ಪದಾರ್ಥಗಳು

ಗೋಧಿ ಹಿಟ್ಟು- ಎರಡು ಕಪ್

ಆಲೂಗೆಡ್ಡೆ- ಅರ್ಧ ಕೆಜಿ

ಕೊತ್ತಂಬರಿಸೊಪ್ಪು- ಒಂದು ಕಂತೆ

ಹಸಿ ಮೆಣಸಿನಕಾಯಿ- ಎಂಟು

ಕೊತ್ತಂಬರಿಬೀಜ- ಮೂರು ಚಮಚ

ಜೀರಿಗೆ- ಒಂದು ಚಮಚ

ಇಂಗು- ಚಿಟಿಕೆಯಷ್ಟು

ಉಪ್ಪು(ರುಚಿಗೆ ತಕ್ಕಷ್ಟು)

ತಯಾರು ಮಾಡುವುದು ಹೇಗೆ?

ಆಲೂಪರೋಟ ಮಾಡಲು ಹೊರಡುವ ಮುನ್ನ ಅರ್ಧ ಗಂಟೆಗೂ ಮೊದಲು ಗೋಧಿಹಿಟ್ಟನ್ನು ಚಪಾತಿ ಹಿಟ್ಟಿನಂತೆ ಕಲೆಸಿಟ್ಟುಕೊಳ್ಳಬೇಕು. ಬಳಿಕ ಆಲೂಗೆಡ್ಡೆಯನ್ನು ಚೆನ್ನಾಗಿ ಬೇಯಿಸಿ ಸಿಪ್ಪೆ ತೆಗೆದು ಪುಡಿಮಾಡಿ ಕಲೆಸಿಕೊಳ್ಳಬೇಕು. ಮತ್ತೊಂದು ಕಡೆಯಲ್ಲಿ ತೆಗೆದುಕೊಂಡ ಮಸಾಲೆ ಪದಾರ್ಥಗಳನ್ನು ಸೇರಿಸಿಕೊಂಡು ಮಿಕ್ಸಿಯಲ್ಲಿ ರುಬ್ಬಿ ಅದನ್ನು ಬೇಯಿಸಿಟ್ಟುಕೊಂಡ ಆಲೂಗೆಡ್ಡೆಗೆ ಬೆರೆಸಿ ಕಲೆಸಬೇಕು.

ಆ ನಂತರ ಕಲೆಸಿಟ್ಟ ಗೋಧಿ ಹಿಟ್ಟನ್ನು ತೆಗೆದುಕೊಂಡು ಮೊದಲಿಗೆ ಸಣ್ಣ ಉಂಡೆ ಮಾಡಿಕೊಂಡು ಅದನ್ನು ಪೂರಿ ಗಾತ್ರದಲ್ಲಿ ಲಟ್ಟಿಸಿಕೊಂಡು ಮಧ್ಯದಲ್ಲಿ ಬೇಯಿಸಿದ ಆಲೂಗೆಡ್ಡೆಯನ್ನೊಳಗೊಂಡ ಮಿಶ್ರಣವನ್ನು ಇಟ್ಟು ಮತ್ತೊಂದು ಪದರ  ಬರುವಂತೆ ತಟ್ಟಿ ಮತ್ತೊಮ್ಮೆ ಮಡಚಿ ಸ್ವಲ್ಪ ಗೋಧಿ ಹಿಟ್ಟನ್ನು ಉದುರಿಸಿಕೊಂಡು  ಅಗಲವಾಗಿ ಲಟ್ಟಿಸಿ, ತಾವಾದಲ್ಲಿ  ಎಣ್ಣೆ ಹಾಕಿಕೊಂಡು ನಿಧಾನ ಉರಿಯಲ್ಲಿ ಬೇಯಿಸಿ ತೆಗೆದರೆ ಆಲೂಪರೋಟ ಸವಿಯಲು ರೆಡಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು