News Karnataka Kannada
Wednesday, May 08 2024
ಅಡುಗೆ ಮನೆ

ಸುಲಭವಾಗಿ ಪುದೀನಾ ಸೂಪ್ ಮಾಡುವುದು ಹೇಗೆ ನೋಡೋಣ

How to make mint soup?
Photo Credit : News Kannada

ಸೂಪ್ ಇಂದ ಕ್ಷಣ ಮೊದಲಿಗೆ ನೆನಪಿಗೆ ಬರುವುದೇ ಟೊಮೆಟೊ ಸೂಪ್ ಅಥವಾ ವೆಜಿಟೇಬಲ್ ಸೂಪ್. ಈ ಸೂಪಗಳನ್ನು ಮನೆಯಲ್ಲಿ ಮಾಡಲು ಹೋದರೆ ಅಯ್ಯೋ ಇದಕ್ಕೆ ಎಷ್ಟೊಂದು ಕೆಲಸ ಇದೆ ಯಾರು ಮಾಡುತ್ತಾರೆ ಅಂತ ಮೂಗು ಮುರಿಯುವವರೇ ಜಾಸ್ತಿ. ಇಲ್ಲೊಂದು ಸುಲಭವಾಗಿ ತಯಾರಾಗುವ ಸೂಪ್ ಇದೆ ಅದುವೇ ಪುದೀನಾ ಸೂಪ್ ಅದನ್ನ ಮಾಡುವುದು ಹೇಗೆ ಎಂದು ನೋಡೋಣ.

ಬೇಕಾಗುವ ಪದಾರ್ಥಗಳು.

  • ಪುದೀನಾ- 1/2 ಕಟ್ಟು
  • ಕೊತ್ತಂಬರಿ ಸೊಪ್ಪು-1/4 ಕಟ್ಟು
  • ಕಾಳುಮೆಣಸಿನ ಪುಡಿ-1/4 ಚಮಚ
  • ಬೆಣ್ಣೆ-1 ಚಮಚ
  • ಫ್ರೆಶ್ ಕ್ರೀಂ-1 ಚಮಚ
  • ಉಪ್ಪು-ರುಚಿಗೆ ತಕ್ಕಷ್ಟು

ಮಾಡುವ ವಿಧಾನ: ಪುದೀನಾ ಮತ್ತು ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಬೇಕು. ನಂತರ ಬಾಣಲೆಗೆ ಬೆಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ರುಬ್ಬಿದ ಪುದೀನಾ ಮಿಶ್ರಣ ಹಾಗೂ ಬೇಕಾಗುವಷ್ಟು ನೀರು ಉಪ್ಪು, ಕಾಳುಮೆಣಸಿನ ಪುಡಿ ಹಾಕಿ ಸ್ವಲ್ಪ ಕುದಿಸಿ ಇಳಿಸಿ. ಮೇಲೆ ಫ್ರೆಶ್ ಕ್ರೀಮ್ ನಿಂದ ಅಲಂಕರಿಸಿದರೆ ರುಚಿಯಾದ ಪುದೀನಾ ಸೂಪ್ ಸಿದ್ಧ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು