News Karnataka Kannada
Friday, May 10 2024
ದೆಹಲಿ

ಖ್ಯಾತ ವರ್ಣಚಿತ್ರಕಾರ, ಕವಿ ಇಮ್ರೋಜ್ ವಿಧಿವಶ

ಖ್ಯಾತ ವರ್ಣಚಿತ್ರಕಾರ ಮತ್ತು ಕವಿ ಇಮ್ರೋಜ್ ಶುಕ್ರವಾರ(ಡಿ.23) ತಮ್ಮ 97 ನೇ ವಯಸ್ಸಿನಲ್ಲಿ ನಿಧನರಾದರು.
Photo Credit : News Kannada

ನವದೆಹಲಿ: ಖ್ಯಾತ ವರ್ಣಚಿತ್ರಕಾರ ಮತ್ತು ಕವಿ ಇಮ್ರೋಜ್ ಶುಕ್ರವಾರ(ಡಿ.23) ತಮ್ಮ 97 ನೇ ವಯಸ್ಸಿನಲ್ಲಿ ನಿಧನರಾದರು.

ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಇಮ್ರೋಜ್ ಕೆಲವು ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸಿದ್ದಾಗ ಕೆಲವು ದಿನಗಳ ಹಿಂದೆ ಮನೆಗೆ ಕರೆತರಲಾಗಿತ್ತು. (ಶುಕ್ರವಾರ )ಇಂದು ಅವರು ನಿಧನರಾದರು ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ.

ಜನವರಿ 26, 1926 ರಂದು ಅವಿಭಜಿತ ಪಂಜಾಬ್ ನ ಲಯಲ್ಪುರದಲ್ಲಿ ಜನಿಸಿದ ಇಮ್ರೋಜ್, ಮೂಲತಃ ಇಂದರ್ಜೀತ್ ಎಂದು ಹೆಸರಿಸಲ್ಪಟ್ಟರು. 1966 ರಲ್ಲಿ, ಪತ್ನಿ ಅಮೃತಾ ಅವರು ತಮ್ಮ ನಿಯತಕಾಲಿಕ ‘ನಾಗಮಣಿ’ ಅನ್ನು ಪ್ರಕಟಿಸಲು ಪ್ರಾರಂಭಿಸಿದಾಗ, ಅವರು ಅವರೊಂದಿಗೆ ಸೇರಿಕೊಂಡರು ಮತ್ತು ಚಿತ್ರಕಾರರಾಗಿ ಕೆಲಸ ಮಾಡಿದರು. ಆಗ ಅವರು ತಮ್ಮ ಹೆಸರನ್ನು ಇಂದರ್ಜೀತ್ ನಿಂದ ಇಮ್ರೋಜ್ ಎಂದು ಬದಲಾಯಿಸಿಕೊಂಡರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು