News Karnataka Kannada
Monday, April 29 2024
ಅಂಕಣ

ನುಗ್ಗೆ ಸೊಪ್ಪು ಮುಖದ ಕಾಂತಿ ಹೆಚ್ಚಿಸಲು ಸಹಕಾರಿ

ಸುಂದರವಾಗಿ ಕಾಣಬೇಕು ಎಂದು ಸಾಮಾನ್ಯವಾಗಿ ಎಲ್ಲರು ಇಚ್ಛೆ ಪಡುವಂತಹ ವಿಚಾರ. ಅದಕ್ಕಾಗಿ ನಾವು ಮಾರುಕಟ್ಟೆಯಲ್ಲಿ ಸಿಗುವ ಬಗೆ ಬಗೆಯ ಸ್ಕಿನ್ ಕ್ರೀಂಗಳನ್ನು ಹಚ್ಚಿಕೊಳ್ಳುತ್ತಾ ಇದ್ದರೆ, ಅದರಿಂದ ಅಡ್ಡ ಪರಿಣಾಮವೇ ಜಾಸ್ತಿ.
Photo Credit : Freepik

ಸುಂದರವಾಗಿ ಕಾಣಬೇಕು ಎಂದು ಸಾಮಾನ್ಯವಾಗಿ ಎಲ್ಲರು ಇಚ್ಛೆ ಪಡುವಂತಹ ವಿಚಾರ. ಅದಕ್ಕಾಗಿ ನಾವು ಮಾರುಕಟ್ಟೆಯಲ್ಲಿ ಸಿಗುವ ಬಗೆ ಬಗೆಯ ಸ್ಕಿನ್ ಕ್ರೀಂಗಳನ್ನು ಹಚ್ಚಿಕೊಳ್ಳುತ್ತಾ ಇದ್ದರೆ, ಅದರಿಂದ ಅಡ್ಡ ಪರಿಣಾಮವೇ ಜಾಸ್ತಿ. ಅದರ ಬದಲು ನಾವು ನುಗ್ಗೆ ಸೊಪ್ಪು ಬಳಸಿಕೊಂಡು ತ್ವಚೆಯ ಅಂದವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಮುಖದ ಸೌಂದರ್ಯವನ್ನು ಕೆಡಿಸುವಂತಹ ಮೊಡವೆ ಸಮಸ್ಯೆ, ಬ್ಲಾಕ್ಹೆಡ್ಸ್, ಕಪ್ಪು ಕಲೆ, ಬಿಸಿಲಿನಿಂದ ಆಗುವಂತಹ ಟ್ಯಾನ್ ಇಂಥಹ ಸಮಸ್ಯೆಗಳಿಂದ ದೂರಾಗ ಬಹುದು. ನುಗ್ಗೆ ಸೊಪ್ಪು ಮುಖದ ಸಮಸ್ಯೆಗಳಿಂದ ದೂರ ಆಗಿ ಸೌಂದರ್ಯ ಹೆಚ್ಚಿಸಿಕೊಳ್ಳಲು ಸಹಕಾರಿ ಆಗಿದೆ. ಇದಕ್ಕಾಗಿ ನೀವು ನುಗ್ಗೆ ಸೊಪ್ಪಿನ ಪೇಸ್ಟ್ ತಯಾರಿಸಿ ಅದನ್ನು ಚರ್ಮದ ಮೇಲೆ ಕಂಡುಬರುವ ಕಪ್ಪು ಕಲೆಗಳ ಮೇಲೆ ಅನ್ವಯಿಸಬೇಕು.

ನುಗ್ಗೆ ಸೊಪ್ಪನ್ನು ಬಿಸಿಲಿನಲ್ಲಿ ಒಣಗಿಸಿ, ನುಣ್ಣಗೆ ಪುಡಿ ಮಾಡಿಕೊಂಡು ಅದಕ್ಕೆ ಹಸಿ ಜೇನುತುಪ್ಪ, ರೋಜ್ ವಾಟರ್, ನಿಂಬೆ ಹಣ್ಣಿನ ರಸ ಮತ್ತು ನೀರನ್ನು ಸೇರಿಸಿ ಪೇಸ್ಟ್ ಮಾಡಿ ಅದನ್ನು, ಬೆಳಗ್ಗೆ ಮುಖಕ್ಕೆ ಅನ್ವಯಿಸಿ ಹಾಗೆ ಬಿಟ್ಟು ಆನಂತರ ಮುಖ ತೊಳೆದುಕೊಳ್ಳಬೇಕು.

ನುಗ್ಗೆ ಸೊಪ್ಪಿನ ಎಲೆಯಲ್ಲಿ ಫೇಸ್ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ಕಾಂತಿ ಹೆಚ್ಚುತ್ತದೆ. ನುಗ್ಗೆಸೊಪ್ಪಿಗೆ ಒಂದು ಚಮಚ ಅರಿಶಿಣ, ಲಿಂಬೆರಸ, ಗಂಧದ ಪುಡಿ ಸೇರಿಸಿ, ನುಣ್ಣಗೆ ರುಬ್ಬಿ ಫೇಸ್ ಪ್ಯಾಕ್ ನಂತೆ ಬಳಸಿಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು. ಇದನ್ನು ಕ್ರಮೇಣ ಫಾಲೋ ಮಾಡಿದರೆ ಉತ್ತಮ ರಿಸಲ್ಟ್ ಪಡೆಯಬಹುದು.

ನುಗ್ಗೆ ಸೊಪ್ಪಿನ ಫೇಸ್ ಮಾಸ್ಕ್ ಅನ್ನು ಅನ್ವಯಿಸುವುದರಿಂದ ವಯಸ್ಸಾದ ಕಲೆಗಳು, ಸುಕ್ಕುಗಳು, ಕಲೆಗಳನ್ನು ನಿವಾರಣೆ ಆಗಿ ಮುಖದ ಅಂದ ಹೆಚ್ಚುತ್ತದೆ.

ನುಗ್ಗೆ ಸೊಪ್ಪಿನ ಫೇಸ್ ಪ್ಯಾಕ್ ಮಾಡಲು ಮೊದಲಿಗೆ ನುಗ್ಗೆ ಎಲೆಗಳಿಗೆ ಲಿಂಬೆರಸ, ಅರಿಶಿನ ಪುಡಿ, ಗಂಧದ ಒಣ ಪುಡಿ ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆದು ಈ ಲೇಪವನ್ನು ಮುಖ, ಕುತ್ತಿಗೆ ಮತ್ತು ಕೈಗಳ ಮೇಲೆ ಹಚ್ಚಿ ಸ್ವಲ್ಪ ಸಮಯ ಹಾಗೆ ಒಣಗಲು ಬಿಡಿ ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ. ಹೀಗೆ ಕ್ರಮೇಣ ಮಾಡುವುದರಿಂದ ಉತ್ತಮ ರಿಸಲ್ಟ್ ಪಡೆಯಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು