News Karnataka Kannada
Sunday, May 05 2024
ಅಡುಗೆ ಮನೆ

ಮೆಂತ್ಯ ಸೊಪ್ಪಿನ ರೈಸ್: ಇಲ್ಲಿದೆ ಸುಲಭ ವಿಧಾನ

How to make fenugreek rice
Photo Credit : Pixabay

ಮನೆಯಲ್ಲಿ ಬೇಗ ತಯಾರಾಗುವುದು ಅಂದ್ರೆ ಅದು ರೈಸ್ ಐಟಂ. ನಮ್ಮ ಭಾರತದಲ್ಲಿ ಹಲವಾರು ಬಗೆಯ ರೈಟ್ ಐಟಂಗಳನ್ನು ತಯಾರು ಮಾಡುತ್ತಾರೆ. ಅದರಲ್ಲೂ ಸುಲಭವಾಗಿ ತಯಾರಾಗುವ ರೈತ ಐಟಂಗಳು ಮಹಿಳೆಯರ ನೆಚ್ಚಿನ ತಿಂಡಿಗಳ ಆಗಿವೆ. ಇವತ್ತು ಮೆಂತ್ಯ ಸೊಪ್ಪಿನ ರೈಸ್ ಮಾಡುವುದು ಹೇಗೆ ಎಂದು ನೋಡೋಣ.

ಬೇಕಾಗುವ ಪದಾರ್ಥಗಳು

  • ಹೆಚ್ಚಿದ ಮೆಂತ್ಯೆ ಸೊಪ್ಪು- 1 ಬಟ್ಟಲು
  • ಈರುಳ್ಳಿ- 1 ದೊಡ್ಡದು 1
  • ಶುಂಠಿ, ಬೆಳುಳ್ಳಿ ಪೇಸ್ಟ್ – 1 ಚಮಚ,
  • ಟೊಮ್ಯಾಟೋ- 2
  • ಬೆಚ್ಚನೆ ಹುರಿದು ಪುಡಿ ಮಾಡಿದ ದನಿಯಾ- 1 ಚಮಚ
  • ಖಾರದ ಪುಡಿ- 1 ಚಮಚ
  • ಜೀರಿಗೆ ಪುಡಿ-ಒಂದೂವರೆ ಚಮಚ
  • ಬಟಾಣಿ 1 ಬಟ್ಟಲು
  • ಅಕ್ಕಿ 1 ಪಾವು
  • ನೀರು-2 1/2 ಲೋಟ

ಮಾಡುವ ವಿಧಾನ: ಮೊದಲು ಕುಕ್ಕರಿನಲ್ಲಿ ಎಣ್ಣೆ ಹಾಕಿ ಈರುಳ್ಳಿಯನ್ನು ಹಸಿ ವಾಸನೆ ಹೋಗುವವರೆಗೆ ಹುರಿದು, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ  ನಂತರ ಮೆಂತ್ಯೆ ಸೊಪ್ಪು, ಬಟಾಣಿ ಹಾಕಿ 3 ನಿಮಿಷ ಬಾಡಿಸಿ ಟೊಮ್ಯಾಟೋ ಸೇರಿಸಿ ಜೀರಿಗೆ, ದನಿಯಾ ಪುಡಿ, ಅರಿಶಿನ, ಅಚ್ಚಖಾರದ ಪುಡಿ, ಉಪ್ಪು, ಅಕ್ಕಿಯನ್ನು ಹಾಕಿ, ನೀರನ್ನು ಸೇರಿಸಿ ಮುಚ್ಚಳ ಮುಚ್ಚಿ. ಕುಕ್ಕರ್ 2 ವಿಷಲ್ ಹಾಕಿದರೆ ಬಿಸಿ ಬಿಸಿ ಮೆಂತ್ಯೆ ರೈಸ್ ಸವಿಯಲು ಸಿದ್ಧ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು