News Karnataka Kannada
Wednesday, May 01 2024
ಕೇರಳ

ಕೇರಳದ ಮಹಿಳೆಯಲ್ಲಿ ಕೋವಿಡ್ ಉಪತಳಿ ಜೆಎನ್. 1 ಪತ್ತೆ

Covid subtype JN in a woman from Kerala. 1 detected
Photo Credit : News Kannada

ತಿರುವನಂತಪುರಂ: ಕಳೆದ 3 ವರ್ಷಗಳ ಹಿಂದೆ ಜಾಗತಿಕವಾಗಿ ತಲ್ಲಣಕ್ಕೆ ಕಾರಣವಾಗಿದ್ದ ಕೋವಿಡ್‌ ಮತ್ತೆ ವಕ್ಕರಿಸಿದಂತಿದೆ. ಕೇರಳದ ಮಹಿಳೆಯೊಬ್ಬರಲ್ಲಿ ಕೋವಿಡ್-‌19 ಉಪತಳಿ ಜೆಎನ್‌.1 (JN.1) ಪತ್ತೆಯಾಗಿರುವುದು ದೃಢಪಟ್ಟಿದೆ.

ನವೆಂಬರ್ 18 ರಂದು 79 ವರ್ಷದ ಮಹಿಳೆಯ ಗಂಟಲು ಮಾದರಿಯನ್ನು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರಿಗೆ ಹೊಸ ಉಪತಳಿಯ ಸೋಂಕಿರುವುದು ಪತ್ತೆಯಾಗಿದೆ. ಅವರಲ್ಲಿ (ILI- ಇನ್ಫ್ಲುಯೆನ್ಝಾ ತರಹದ ಕಾಯಿಲೆ) ಸೌಮ್ಯ ಲಕ್ಷಣ ಕಂಡು ಬಂದಿದೆ. ಕೋವಿಡ್-19 ನಿಂದ ಅವರು ಚೇತರಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊರೊನಾ ವೈರಲ್‌ ಉಪತಳಿ ಜೆಎನ್‌.1 ವಿಶ್ವದಲ್ಲೇ ಮೊದಲ ಪ್ರಕರಣ ಅಮೆರಿಕದಲ್ಲಿ ಪತ್ತೆಯಾಯಿತು. ಭಾರತದಲ್ಲಿ ಪ್ರಸ್ತುತ ಕೋವಿಡ್-19 ಪ್ರಕರಣಗಳಲ್ಲಿ 90% ಕ್ಕಿಂತ ಹೆಚ್ಚು ಪ್ರಕರಣಗಳನ್ನು ಸೌಮ್ಯ ಎಂದು ವರ್ಗೀಕರಿಸಲಾಗಿದೆ. ವ್ಯಕ್ತಿಗಳು ಮನೆಯಲ್ಲಿ ಪ್ರತ್ಯೇಕವಾಗಿರಬೇಕು ಎಂದು ಮೂಲಗಳು ಸೂಚಿಸಿವೆ.

ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ಪ್ರಯಾಣಿಕರೊಬ್ಬರಲ್ಲಿ ಸಿಂಗಾಪುರದಲ್ಲಿ ಜೆಎನ್.1 ಉಪತಳಿ ಪತ್ತೆಯಾಗಿತ್ತು. ಅವರು ಅಕ್ಟೋಬರ್ 25 ರಂದು ಸಿಂಗಾಪುರಕ್ಕೆ ಭೇಟಿ ನೀಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು