ನಮ್ಮ ದೇಶದಲ್ಲಿ ಬಹುತೇಕ ಜನರಿಗೆ ಬೆಳಗ್ಗೆ ಎದ್ದು ಹಲ್ಲುಜ್ಜಿದ ತಕ್ಷಣವೇ ಒಂದು ಕಪ್ ಬಿಸಿ ಬಿಸಿ ಚಹಾ ಕುಡಿದರೆ ಒಂದು ರೀತಿಯ ಸಮಾಧಾನ ಅಂತ ಹೇಳಬಹುದು. ಆದರೆ ನೀವು ಕುಡಿಯುವ ಈ ಚಹಾವನ್ನು ಇನ್ನಷ್ಟು ರುಚಿಕರ ಮತ್ತು ಆರೋಗ್ಯಕರ ಮಾಡಿಕೊಳ್ಳಲು ಮಸಾಲೆ ಚಹಾ ಮಾಡಿಕೊಳ್ಳುವುದು ಉತ್ತಮ ಆಯ್ಕೆ. ಹೆಚ್ಚಿನವರು ಸಾಮಾನ್ಯವಾಗಿ ಚಹಾಗೆ ಹಾಕಿಕೊಳ್ಳಲು ಮಾರುಕಟ್ಟೆಯಲ್ಲಿ ಸಿದ್ಧಪಡಿಸಿದ ಪ್ಯಾಕೆಟ್ ಮಸಾಲೆ ಖರೀದಿಸುತ್ತಾರೆ. ಇಲ್ಲಿ ನಾವು ಚಹಾ ಮಸಾಲೆಯನ್ನು ಮನೆಯಲ್ಲಿಯೇ ಹೇಗೆ ತಯಾರು ಮಾಡಿಕೊಳ್ಳಬಹುದು ಎಂದು ತಿಳಿಸಿ ಕೊಡುತ್ತೇವೆ. ಇದರಿಂದ ನೀವು ಕೆಲವೇ ನಿಮಿಷಗಳಲ್ಲಿ ಮಸಾಲೆ ಚಹಾವನ್ನು ತಯಾರಿಸಬಹುದು.
ಬೇಕಾಗುವ ಪದಾರ್ಥಗಳು
* ಶುಂಠಿ- ಒಂದು 1 ಇಂಚು
* ಏಲಕ್ಕಿ-ಎರಡು
* ಲವಂಗ-ನಾಲ್ಕು
* ಕಾಳುಮೆಣಸು-10
* ಟೀ ಪುಡಿ- ಎರಡು ಚಮಚ
* ನೀರು ಒಂದು ಕಪ್
* ಹಾಲು- ಎರಡು ಬಟ್ಟಲು
* ಸಕ್ಕರೆ- ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಎಲ್ಲಾ ಮಸಾಲೆ ಪದಾರ್ಥಗಳು ಹಾಗೂ ಟೀ ಪುಡಿಯನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ.
ಬಳಿಕ ಹಾಲು ಹಾಗೂ ಸಕ್ಕರೆ ಹಾಕಿ ಕುದಿಸಿ. ಇದೀಗ ಸೋಸಿ, ಇದೀಗ ರುಚಿಕರವಾದ ಟೀ ಸವಿಯಲು ಸಿದ್ಧ.