News Karnataka Kannada
Friday, May 03 2024
ಅಡುಗೆ ಮನೆ

ರುಚಿಕರವಾದ ʼಕೇಸರಿ ಪಿಸ್ತಾ ಖೀರ್ʼ ಮಾಡಿ ಸವಿಯಿರಿ

Recipe Kesar
Photo Credit : News Kannada

ಪಿಸ್ತಾ ಆರೋಗ್ಯಕರ ಕೊಬ್ಬುಗಳು, ಫೈಬರ್, ಪ್ರೋಟೀನ್, ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಬಿ 6 ಮತ್ತು ಥಯಾಮಿನ್ ಸೇರಿದಂತೆ ವಿವಿಧ ಪೋಷಕಾಂಶಗಳ ಉತ್ತಮ ಮೂಲವಾಗಿದೆ. ಇದು ತಿನ್ನಲು ರುಚಿಯಾಗಿದ್ದು, ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಉತ್ಕರ್ಷಣ ನಿರೋಧಕಗಳು ಆರೋಗ್ಯಕ್ಕೆ ಅತ್ಯಗತ್ಯ. ಅವು ಜೀವಕೋಶದ ಹಾನಿಯನ್ನು ತಡೆಯುತ್ತವೆ ಮತ್ತು ಕ್ಯಾನ್ಸರ್’ನಂತಹ ರೋಗದ ಅಪಾಯವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಪಿಸ್ತಾವು ಇತರ ನಟ್ಸ್ ಮತ್ತು ಬೀಜಗಳಿಗಿಂತ ಹೆಚ್ಚು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಹಾಗಾಗಿ  ಅನಾರೋಗ್ಯಕರ ಅಹಾರ ಪದಾರ್ಥಗಳನ್ನು ಸೇವಿಸುವ ಬದಲು ನೀವೊಮ್ಮೆ  ರುಚಿಕರವಾದ ಕೇಸರಿ ಪಿಸ್ತಾ ಕೀರ್‌ ಮಾಡಿ ಸವಿಯಿರಿ. . .

ಬೇಕಾಗುವ ಪದಾರ್ಥಗಳು. . .
ತುಪ್ಪ- ಅರ್ಧ ಬಟ್ಟಲು
ಬಾಸುಮತಿ ಅಕ್ಕಿ- ಒಂದು ಬಟ್ಟಲು
ಹಾಲು- ಅರ್ಧ ಲೀಟರ್
ದ್ರಾಕ್ಷಿ- ಸ್ವಲ್ಪ
ಗೋಡಂಬಿ-ಸ್ವಲ್ಪ
ಏಲಕ್ಕಿ 2-3
ಕೇಸರಿ- ಸ್ವಲ್ಪ
ಸಕ್ಕರೆ- ಒಂದೂವರೆ ಬಟ್ಟಲು
ಪಿಸ್ತಾ- 10-15

ಮಾಡುವ ವಿಧಾನ. . .
ಒಂದು ಪಾತ್ರೆಗೆ ತುಪ್ಪವನ್ನು ಹಾಕಿ ಬಿಸಿ ಮಾಡಿ. ಅದಕ್ಕೆ ಅಕ್ಕಿಯನ್ನು ಹಾಕಿ ಪ್ರೈ ಮಾಡಿ.
ನಂತರ ಇದೇ ಪಾತ್ರೆಯಲ್ಲಿಯೇ ದ್ರಾಕ್ಷಿ ಹಾಗೂ ಗೋಡಂಬಿಯನ್ನು ಹುರಿದಿಟ್ಟುಕೊಳ್ಳಿ.
ಮತ್ತೊಂದು ಪಾತ್ರೆಯಲ್ಲಿ ಹಾಲನ್ನು ಕುದಿಸಲು ಇಡಿ. ಅದಕ್ಕೆ ಸಕ್ಕರೆಯನ್ನು ಹಾಕಿ.
ಹಾಲು ತಳ ಹಿಡಿಯದಂತೆ ನೋಡಿಕೊಳ್ಳಿ. ಬಳಿಕ ಏಲಕ್ಕಿ ಪುಡಿ, ಕೇಸರಿ ಹಾಗೂ ಸಣ್ಣಗೆ ಕತ್ತರಿಸಿಕೊಂಡ ಪಿಸ್ತಾವನ್ನು ಹಾಕಿ.
ನಂತರ ಹಾಲಿಗೆ ಅಕ್ಕಿಯನ್ನು ಹಾಕಿ ಬೇಯಿಸಿ. ಅಕ್ಕಿ ಬೆಂದ ನಂತರ ಸ್ವಲ್ಪ ತಣ್ಣಗಾಗಲು ಬಿಡಿ.
ಬಳಿಕ ಫ್ರಿಡ್ಜ್ ನಲ್ಲಿಟ್ಟು, ತಣ್ಣನೆಯ ಕೀರನ್ನು ಸವಿಯಿರಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು