News Karnataka Kannada
Sunday, May 19 2024
ಮೈಸೂರು

ಮೈಸೂರಿನ ದೊಡ್ಡ ಗಡಿಯಾರ ಸಂರಕ್ಷಣಾ ಕಾರ್ಯ ಆರಂಭ

Mysuru's big clock conservation work begins
Photo Credit : By Author

ಮೈಸೂರು: ಪಾರಂಪರಿಕ ನಗರಿ ಮೈಸೂರಿನ ಹೆಗ್ಗುರುತಾದ ದೊಡ್ಡ ಗಡಿಯಾರ ಸಂರಕ್ಷಣಾ ಕಾರ್ಯಕ್ಕೆ ಮೈಸೂರು ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್ ಚಾಲನೆ ನೀಡಿರುವುದು ಸಾರ್ವಜನಿಕರಿಗೆ ಖುಷಿ ತಂದಿದೆ.

ಕೆಲ ವರ್ಷಗಳಿಂದ ಶಿಥಿಲಾವಸ್ಥೆ ತಲುಪಿದ್ದ ನಗರದ ಪುರಭವನ ಎದುರಿನ ದೊಡ್ಡ ಗಡಿಯಾರವನ್ನು ಮಹಾನಗರ ಪಾಲಿಕೆ, ಪಾರಂಪರಿಕ ಮತ್ತು ಪುರಾತತ್ವ ಇಲಾಖೆ ಸಹಯೋಗದಲ್ಲಿ ಸಂರಕ್ಷಣೆ ಮಾಡುವ ಕಾರ್ಯ ನಡೆಸುತ್ತಿದ್ದು, ಕಾಮಗಾರಿ ಜಿಲ್ಲಾ ಪಾರಂಪರಿಕ ಸಮಿತಿ ಸದಸ್ಯರ ಸಹಕಾರದಲ್ಲಿ ನಡೆಯಲಿದೆ.

ಮೇಯರ್ ಶಿವಕುಮಾರ್, ಶಾಸಕ ಕೆ.ಹರೀಶ್ ಗೌಡ ಅವರು ಜಂಟಿಯಾಗಿ ಸಂರಕ್ಷಣೆ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಸಂರಕ್ಷಣಾ ಕಾರ್ಯಕ್ಕೆ ನಗರ ಪಾಲಿಕೆ ಮೊದಲ ಹಂತದಲ್ಲಿ 43 ಲಕ್ಷ ರೂ. ಅನುದಾನ ನೀಡಿದೆ.

ಬಳಿಕ ಮಾತನಾಡಿದ ಮೇಯರ್ ಶಿವಕುಮಾರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತದ ರಜತ ಮಹೋತ್ಸವದ ಸ್ಮರಣೆಯಲ್ಲಿ ನಿರ್ಮಿಸಿದ್ದ ದೊಡ್ಡ ಗಡಿಯಾರದ ಕೆಲವು ಭಾಗಗಳು ಶಿಥಿಲಾವಸ್ಥೆ ತಲುಪಿದ್ದವು. ಸಂರಕ್ಷಿಸುವಂತೆ ನಾಗರಿಕರು, ಇತಿಹಾಸ ತಜ್ಞರು ಆಗ್ರಹಪಡಿಸಿದ್ದರು. ಪಾಲಿಕೆಯ ಅನುದಾನದಿಂದ ಸಂರಕ್ಷಣಾ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ ಎಂದು ಹೇಳಿದರು.

ದೊಡ್ಡ ಗಡಿಯಾರದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಜಾಗ್ರತೆಯಿಂದ ಕಾಮಗಾರಿ ನಿರ್ವಹಿಸುವಂತೆ ಪಾರಂಪರಿಕ ಇಲಾಖೆಗೆ ಜವಾಬ್ದಾರಿ ನೀಡಲಾಗಿದೆ. ಗಡಿಯಾರದ ಒಳಭಾಗದ ಮತ್ತು ಮೇಲ್ಬಾಗದಲ್ಲಿನ ಬಿರುಕು ಸಹಿತವಾಗಿ ಎಲ್ಲ ರೀತಿಯ ಅಭಿವೃದ್ಧಿ ಕೆಲಸಗಳನ್ನು ಮಾಡಲಿದ್ದಾರೆ ಎಂದು ತಿಳಿಸಿದರು.

ಇತಿಹಾಸ ತಜ್ಞ, ಜಿಲ್ಲಾ ಪಾರಂಪರಿಕ ಸಮಿತಿ ಸದಸ್ಯ ಡಾ.ಎನ್.ಎಸ್.ರಂಗರಾಜು ಮಾತನಾಡಿ, ನಿರಂತರ ಪ್ರಯತ್ನದ ಫಲದಿಂದ ದೊಡ್ಡ ಗಡಿಯಾರ ಸಂರಕ್ಷಣೆ ಕಾಮಗಾರಿ ಆರಂಭಂಗೊಂಡಿದೆ. ಸಂರಕ್ಷಣೆ ಕಾರ್ಯ ಆರಂಭಿಸುವ ಮುನ್ನ ಪ್ರಾಚ್ಯವಸ್ತು ಇಲಾಖೆಯ ಎಂಜಿನಿಯರ್ ಮಹೇಶ್, ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ. ಎಲ್ಲರ ಸಲಹೆ ಸ್ವೀಕರಿಸಲಾಗುವುದು ಎಂದು ನುಡಿದರು.

ಈ ಸಂದರ್ಭ ಉಪ ಮೇಯರ್ ಡಾ.ಜಿ.ರೂಪಾ, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಡಿ.ನಾಗರಾಜು, ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಶರೀಫ್ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು