ಸಬ್ಬಸಿಗೆ ಕೂಟು: ಬಾಯಿಗೂ ರುಚಿ, ಆರೋಗ್ಯಕ್ಕೂ ಹಿತ

ಬೇಸಿಗೆಯಲ್ಲಿ ಸೊಪ್ಪಿನ ಬಳಕೆಯನ್ನು ಹೆಚ್ಚೆಚ್ಚು ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳಿತು. ಹೀಗಾಗಿ ಸಬ್ಬಸಿಗೆ ಸೊಪ್ಪು ಬಳಸಿ ತಮಗೆ ಬೇಕಾದ ಪದಾರ್ಥಗಳನ್ನು ತಯಾರಿ ಮಾಡಿಕೊಳ್ಳುವುದು ಒಳ್ಳೆಯದು. ಅದರಂತೆ ಅನ್ನದ ಜತೆಗೆ ಸಾಂಬಾರ್ ಆಗು ಸಬ್ಬಸಿಗೆ ಕೂಟು ಮಾಡಿದರೆ ರುಚಿಯಾಗಿರುತ್ತದೆ.

ಬೇಕಾಗುವ ಪದಾರ್ಥಗಳು: ಸಬ್ಬಸಿಗೆ ಸೊಪ್ಪು-ಎರಡು ಕಟ್ಟು, ತೊಗರಿಬೇಳೆ- ಅರ್ಧಪಾವು, ಎಣ್ಣೆ- ಸ್ವಲ್ಪ, ಉಪ್ಪು- ರುಚಿಗೆ ತಕ್ಕಷ್ಟು, ಉದ್ದಿನ ಬೇಳೆ- ಸ್ವಲ್ಪ, ಬ್ಯಾಡಗಿ ಒಣಮೆಣಸಿನ ಕಾಯಿ- ನಾಲ್ಕು, ಇಂಗು- ಸ್ವಲ್ಪ. ಕಾಳು ಮೆಣಸು-ಸ್ವಲ್ಪ, ಜೀರಿಗೆ- ಒಂದು ಚಮಚ, ಗಸಗಸ- ಎರಡು ಚಮಚ, ಕಾಯಿತುರಿ- ಅರ್ಧ ಬಟ್ಟಲು

ಯಾರು ಮಾಡುವುದು ಹೇಗೆ?: ಮೊದಲಿಗೆ ತೊಗರಿ ಬೇಳೆಯನ್ನು ಪಾತ್ರೆಯಲ್ಲಿ ಹಾಕಿ ಸುಮಾರು ಅರ್ಧದಷ್ಟು ಬೇಯಿಸಬೇಕು. ಇನ್ನೊಂದೆಡೆ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಅದರಲ್ಲಿ ಉದ್ದಿನ ಬೇಳೆ, ಒಣಮೆಣಸು, ಇಂಗು, ಕರಿಮೆಣಸು ಹಾಕಿ ಹುರಿಯಬೇಕು. ಬಳಿಕ ಇಳಿಸಿ ಅದಕ್ಕೆ ಜೀರಿಗೆ, ಗಸಗಸ, ಕಾಯಿತುರಿಯನ್ನು ಹಾಕಿ ಎಲ್ಲವನ್ನು ಸೇರಿಸಿ ಮಿಕ್ಸಿಯಲ್ಲಿ ರುಬ್ಬಬೇಕು.

ಇಷ್ಟು ತಯಾರಿ ಮಾಡಿಕೊಂಡ ಬಳಿಕ ಅರೆ ಬೆಂದ ಬೇಳೆಯ ಪಾತ್ರೆಗೆ ಚಿಕ್ಕದಾಗಿ ಹಚ್ಚಿದ ಸಬ್ಬಸಿಗೆ ಸೊಪ್ಪನ್ನು ಹಾಕಿ ಬೇಯಿಸಿಬೇಕು. ಸೊಪ್ಪು ಮತ್ತು ಬೇಳೆ ಚೆನ್ನಾಗಿ ಬೆಂದ ಬಳಿಕ ಅದಕ್ಕೆ ರುಬ್ಬಿಟ್ಟು ಕೊಂಡಿದ್ದ ಮಸಾಲೆಯನ್ನು ಹಾಕಿ ಚೆನ್ನಾಗಿ ಕುದಿಸಿ ರುಚಿ ನೋಡಿಕೊಂಡು ಉಪ್ಪು ಹಾಕಬೇಕು. ಹುಳಿಯ ಅಗತ್ಯವಿದ್ದರೆ ನಿಂಬೆ ರಸವನ್ನು ಹಾಕಬಹುದು. ಹೀಗೆ ಮಾಡಿದರೆ ಸಬ್ಬಸಿಗೆ ಕೂಟು ತಯಾರಾದಂತೆಯೇ.

Nisarga K

Recent Posts

ಎಚ್​.ಡಿ. ರೇವಣ್ಣಗೆ ಇನ್ನೂ ಮೂರು ದಿನ ಜೈಲೇ ಗತಿ!

 ಲೈಂಗಿಕ ಹಗರಣ ಆರೋಪದಲ್ಲಿ ಸಂತ್ರಸ್ತ ಮಹಿಳೆಯ ಕಿಡ್ನ್ಯಾಪ್​ ಕೇಸ್​ನಲ್ಲಿ ಬಂಧಿತರಾಗಿರುವ ಮಾಜಿ ಶಾಸಕ ಎಚ್.ಡಿ. ರೇವಣ್ಣ ಅವರ ಜಾಮೀನು ವಿಚಾರಣೆ…

7 seconds ago

ಪ್ರಜ್ವಲ್ ಪೆನ್‍ಡ್ರೈವ್ ಕೇಸ್; ಸಂತ್ರಸ್ತೆಗೆ ಮೂವರಿಂದ ಬೆದರಿಕೆ

ಭಾರೀ ಕೋಲಾಹಲ ಎಬ್ಬಿಸಿರುವ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸರೆಂದು ಹೇಳಿಕೊಂಡು ಬಂದಿರುವ…

19 mins ago

ನೂರು ರೋಗಗಳಿಗೂ ಒಂದೇ ಔಷಧ ಪಾನೀಯ: ಎಳನೀರು

ಎಳನೀರು ನೂರು ರೋಗಗಳಿಗೆ ಒಂದೇ ಔಷಧಿ ಎಂಬುದು ಬಹಳಷ್ಟು ಮಂದಿಗೆ ತಿಳಿದಿಲ್ಲ. ಎಳನೀರಿನಲ್ಲಿ ಅಧಿಕ  ವಿಟಮಿನ್ ಹಾಗೂ ಖನಿಜವನ್ನು ಒಳಗೊಂಡಿದೆ.…

24 mins ago

ಪಟಾಕಿ ಘಟಕ ಸ್ಫೋಟಗೊಂಡು 8 ಕಾರ್ಮಿಕರು ಸಾವು !

ಇಂದು ತಮಿಳುನಾಡಿನ ಶಿವಕಾಶಿ ಸಮೀಪದ ಸೆಂಗಮಲಪಟ್ಟಿಯಲ್ಲಿರುವ ಪಟಾಕಿ ಘಟಕದಲ್ಲಿ ಸ್ಫೋಟ ಸಂಭವಿಸಿದ್ದು, ಎಂಟು ಕಾರ್ಮಿಕರು ಸಾವನ್ನಪ್ಪಿದ್ದಾರೆ.

28 mins ago

ಎಸ್‌ಎಸ್‌ಎಲ್‌ಸಿ ಫೇಲ್; ಮಂಡ್ಯದ ಬಾಲಕ ನೇಣಿಗೆ ಶರಣು, ವಿಷ ಸೇವಿಸಿದ ವಿದ್ಯಾರ್ಥಿನಿ

ರಾಜ್ಯಾದ್ಯಂತ ಇಂದು ಬೆಳಗ್ಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದೆ. ಆದರೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಂಡ್ಯ ವಿದ್ಯಾರ್ಥಿ ಲಿಖಿತ್ ಫೇಲ್ ಆಗಿದ್ದಕ್ಕೆ ಮನನೊಂದು…

35 mins ago

ಆಟೋ ರಿಕ್ಷಾ ಡಿಕ್ಕಿ ಹೊಡೆದು ಪಾದಚಾರಿ ಸಾವು

ಸಂಪ್ಯದಲ್ಲಿ ಆಟೋ ರಿಕ್ಷಾವೊಂದು ಡಿಕ್ಕಿಯಾಗಿ ಪಾದಚಾರಿಯಾಗಿದ್ದ ನಿವೃತ ಗಣಿತ ಶಿಕ್ಷಕ ಮರಿಕೆ ನಿವಾಸಿ ಸೂರ್ಯನಾರಾಯಣ ಕಾರಂತ (80.ವ)ರವರು ಮೃತಪಟ್ಟ ಘಟನೆ…

45 mins ago