News Karnataka Kannada
Saturday, April 27 2024
ಅಡುಗೆ ಮನೆ

ಬಿರು ಬಿಸಿಲಿನಲ್ಲಿ ತಂಪಾಗಿ ಮನೆಯಲ್ಲಿಯೇ ಮಾಡಿ ತಿನ್ನಿ ಕುಲ್ಫಿ ಐಸ್‍ಕ್ರೀಂ

ಈ ಬಿರು ಬಿಸಿಲಿನಲ್ಲಿ ಮನೆಯಲ್ಲೇ ಏನಾದ್ರೂ ತಣ್ಣಗೆ ತಿನ್ನೋಣ. ಕುಡಿಯೋಣ ಅನ್ನೋರಿಗಾಗಿ ಇಲ್ಲಿದೆ ಕುಲ್ಫಿ ಐಸ್‍ಕ್ರೀಂ ರೆಸಿಪಿ
Photo Credit : Pixabay

ಈ ಬಿರು ಬಿಸಿಲಿನಲ್ಲಿ ಮನೆಯಲ್ಲೇ ಏನಾದ್ರೂ ತಣ್ಣಗೆ ತಿನ್ನೋಣ. ಕುಡಿಯೋಣ ಅನ್ನೋರಿಗಾಗಿ ಇಲ್ಲಿದೆ ಕುಲ್ಫಿ ಐಸ್‍ಕ್ರೀಂ ರೆಸಿಪಿ..

ಬೇಕಾಗಿರುವ ಸಾಮಾಗ್ರಿಗಳು

ಕೆನೆಭರಿತ ಹಾಲು – 1/2ಲೀಟರ್
ಸಕ್ಕರೆ – 1/4 ಕಪ್
ಜೋಳದ ಹಿಟ್ಟು – 1 ಟಿಸ್ಪೂನ್
ಕೇಸರಿ ದಳಗಳು
ಕನ್ಡೆನ್ಸ್‍ಡ್ ಮಿಲ್ಕ್ – 1/4 ಕಪ್
ಗೋಡಂಬಿ, ಪಿಸ್ತಾ, ಬಾದಾಮಿ – 8-10

ಮಾಡುವ ವಿಧಾನ: ಒಂದು ಪ್ಯಾನ್‍ಗೆ  ಅರ್ಧ ಲೀಟರ್ ಹಾಲನ್ನು ಮುಕ್ಕಾಲು ಭಾಗವಾಗುವಷ್ಟು ಚೆನ್ನಾಗಿ ಕುದಿಸಿ ಅದಕ್ಕೆ 1 ಟಿಸ್ಪೂನ್ ಜೋಳದ ಹಿಟ್ಟುನ್ನು ನೀರಿನಲ್ಲಿ ಕಲಸಿ ಹಾಲಿಗೆ ಮಿಕ್ಸ್ ಮಾಡಿ ತಿರುಗಿಸಿ. ಹಾಲು ಸ್ವಲ್ಪ ಗಟ್ಟಿ ಆಗಲು ಆರಂಭಿಸುತ್ತದೆ. ಗಟ್ಟಿಯಾದ ಹಾಲಿಗೆ 1/4 ಕಪ್ ಸಕ್ಕರೆ ಸೇರಿಸಿ ಕೇಸರಿ ದಳಗಳನ್ನು ಹಾಕಿ ತಿರುಗಿಸಿ ಸ್ಟವ್ ಆಫ್ ಮಾಡಿ.

ಹಾಲು ಆರಿದಮೇಲೆ ಒಂದು ಬೌಲ್ ಗೆ ಹಾಕಿಕೊಂಡು ಅದಕ್ಕೆ 1/4 ಕಪ್ ಕನ್ಡೆನ್ಸ್ ಡ್ ಮಿಲ್ಕ್ ಸೇರಿಸಿ ಬ್ಲೇಂಡ್ ಮಾಡಿ. ಎಲ್ಲವೂ ಸಮ ಪ್ರಮಾಣದಲ್ಲಿ ಮಿಕ್ಸ್ ಆಗೋವರೆಗೂ ಬ್ಲೇಂಡ್ ಮಾಡಿ.

ಬಳಿಕ ಅದಕ್ಕೆ ಸಣ್ಣಗೆ ಹೆಚ್ಚಿದ ಗೋಡಂಬಿ, ಪಿಸ್ತಾ, ಬಾದಾಮಿ ಚೂರುಗಳನ್ನು ಮಿಕ್ಸ್ ಮಾಡಿ. ಒಂದು ಪ್ಲಾಸ್ಟಿಕ್ ಕಪ್ ಅಥವಾ ಮೌಲ್ಡ್‍ಗೆ ವರ್ಗಾಯಿಸಿ ಐಸ್‍ಕ್ರೀಂ ಕಡ್ಡಿ ಇಟ್ಟು 20 ನಿಮಿಷ ಫ್ರೀಜ್ ಮಾಡಿದರೆ ಕುಲ್ಫಿ ಐಸ್‍ಕ್ರೀಂ ರೆಡಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು