ನಾಲ್ಕೇ ಪದಾರ್ಥದಿಂದ ತಯಾರಾಗುತ್ತೆ ತೆಂಗಿನಕಾಯಿ ಬಿಸ್ಕೆಟ್

ಈ ತೆಂಗಿನಕಾಯಿ ಬಿಸ್ಕೆಟ್ ಮಾಡಲು ಕೇವಲ ನಾಲ್ಕೇ ಪದಾರ್ಥ ಸಾಕು. ಮಾತ್ರವಲ್ಲದೇ ತುಂಬಾ ಸಿಂಪಲ್ ಕೂಡಾ.  ಸಂಜೆ ವೇಳೆ ಚಹಾಗೆ ಇದು ಒಂದು ಪರ್ಫೆಕ್ಟ್ ಸ್ನ್ಯಾಕ್ಸ್ ಆಗಬಲ್ಲದು. ಇದನ್ನು ಹೇಗೆ ಮಾಡುವುದು ಎಂದು ನೋಡೋಣ.

ಬೇಕಾಗುವ ಪದಾರ್ಥಗಳು:
ಒಣ ತೆಂಗಿನತುರಿ – ಅರ್ಧ ಕಪ್
ಅಡುಗೆ ಸೋಡಾ – ಕಾಲು ಟೀಸ್ಪೂನ್
ಕರಗಿಸಿದ ಬೆಣ್ಣೆ – ಕಾಲು ಕಪ್
ಮೊಟ್ಟೆ – 5
ಉಪ್ಪು – ಕಾಲು ಟೀಸ್ಪೂನ್ (ಐಚ್ಛಿಕ)

ಮಾಡುವ ವಿಧಾನ: ಮೊದಲಿಗೆ ಓವನ್ ಅನ್ನು 350 ಡಿಗ್ರಿ ಪ್ಯಾರಾಹೀಟ್‌ಗೆ ಪೂರ್ವಭಾವಿಯಾಗಿ ಕಾಯಿಸಿಕೊಳ್ಳಿ.

ಒಣ ತೆಂಗಿನ ತುರಿ ಮತ್ತು ಕರಗಿದ ತುಪ್ಪವನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಮೊಟ್ಟೆಗಳನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.

ಹಿಟ್ಟನ್ನು ಸುಮಾರು 3 ಟೀಸ್ಪೂನ್ ಗಾತ್ರದಷ್ಟು ಒಂದೊಂದು ಬಿಸ್ಕೆಟ್ ಆಗುವಂತೆ ಬೇಕಿಂಗ್ ಶೀಟ್‌ನಲ್ಲಿ ಜೋಡಿಸಿಕೊಂಡು ಓವನ್‌ನಲ್ಲಿ ಇರಿಸಿ, ಸುಮಾರು 20 ನಿಮಿಷ ಬೇಯಿಸಿಕೊಳ್ಳಿ. ಬಳಿಕ ಟೂತ್‌ಪಿಕ್ ಬಳಸಿ ಬಿಸ್ಕಿಟ್ ಚೆನ್ನಾಗಿ ಬೆಂದಿದೆಯೇ ಎಂಬುದನ್ನು ಪರಿಶೀಲಿಸಿ. ಬೆಂದಿಲ್ಲವೆಂದಾದರೆ ಮತ್ತೆ 10 ನಿಮಿಷ ಬೇಯಿಸಿಕೊಂಡರೆ ಟೇಸ್ಟಿ ತೆಂಗಿನಕಾಯಿ ಬಿಸ್ಕೆಟ್ ತಯಾರಾಗುತ್ತದೆ.

Ashika S

Recent Posts

100ರ ಮುಖ ಬೆಲೆಯ ಹಳೆ ಮಾದರಿ ನೋಟು ರದ್ದಾಗದಿದ್ದರೂ ಚಲಾವಣೆಗೆ ಹಿಂದೇಟು

ತಾಲ್ಲೂಕಿನಲ್ಲಿ ಸದ್ಯ ಚಲಾವಣೆಯಲ್ಲಿರುವ ಯಾವುದೇ ನೋಟು ಬಂದ್ ಆಗದಿದ್ದರೂ ₹100ರ ಮುಖ ಬೆಲೆಯ ಹಳೆ ಮಾದರಿ ನೋಟು ಹಾಗೂ ₹10…

5 mins ago

ಇಂದಿನ ಆರ್​​​ಸಿಬಿ, ಪಂಜಾಬ್​​ ನಡುವಿನ ಐಪಿಎಲ್​​ ಪಂದ್ಯ ರದ್ದು?

ಕಳೆದ ಮೂರು ದಿನಗಳಿಂದ ಇಡೀ ದೇಶಾದ್ಯಂತ ಭಾರೀ ಮಳೆಯಾಗಿದೆ. ಹಿಮಾಚಲ ಪ್ರದೇಶದಲ್ಲೂ ಗುಡುಗು ಸಮೇತ ಮಳೆ ಸುರಿಯುತ್ತಿದೆ. ಇಷ್ಟೇ ಅಲ್ಲ…

5 mins ago

ಎಸ್​ಎಸ್​ಎಲ್​ಸಿ ಫಲಿತಾಂಶ: ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಕೊನೆ ಸ್ಥಾನ

ಇಂದು ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟವಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳೇ ಕೊನೆಯ ಸ್ಥಾನದಲ್ಲಿ ಮುಂದುವರೆದಿವೆ. 

18 mins ago

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆನೆಯ ಕಾಲಿಗೆ ಗಾಯ; ನಿರ್ವಹಣೆ ನಿರ್ಲಕ್ಷ್ಯ ಆರೋಪ

ರಾಜ್ಯದ ಶ್ರೀಮಂತ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಆನೆ ಕಾಲಿಗೆ ಗಾಯವಾಗಿದೆ. ಆನೆ ಮಾವುತ ಶ್ರೀನಿವಾಸ್ ಮೇಲೆ ಆನೆಯ ನಿರ್ವಹಣೆಯ ನಿರ್ಲಕ್ಷ್ಯದ…

46 mins ago

ಕಾರ್ಕಳ ಜ್ಞಾನಸುಧಾ ಶಾಲೆಯ ವಿದ್ಯಾರ್ಥಿನಿ ಸಹನಾ ರಾಜ್ಯಕ್ಕೆ ತೃತೀಯ

ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಘೋಷಣೆಯಾಗಿದ್ದು, ಕಾರ್ಕಳ ತಾಲೂಕಿನ ಗಣಿತನಗರದ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆಯ ಸಹನಾ…

51 mins ago

ಸಲ್ಮಾನ್‌ ಖಾನ್‌ ʼಸಿಕಂದರ್‌ʼಗೆ ರಶ್ಮಿಕಾ ಮಂದಣ್ಣ ನಾಯಕಿ

ಕನ್ನಡದ ರಶ್ಮಿಕಾ ಮಂದಣ್ಣ ಅವರಿಗೆ ದಕ್ಷಿಣದ ಸಿನಿಮಾಗಳ ಬಳಿಕ ಬಿಟೌನ್ ನಲ್ಲಿ ಅದೃಷ್ಟ ಖುಲಾಯಿಸಿದೆ. ರಣ್ಬೀರ್ ಕಪೂರ್ ಅವರ 'ಅನಿಮಲ್'…

1 hour ago