News Karnataka Kannada
Saturday, April 27 2024
ಅಡುಗೆ ಮನೆ

ನಾಲ್ಕೇ ಪದಾರ್ಥದಿಂದ ತಯಾರಾಗುತ್ತೆ ತೆಂಗಿನಕಾಯಿ ಬಿಸ್ಕೆಟ್

ಈ ತೆಂಗಿನಕಾಯಿ ಬಿಸ್ಕಿಟ್ ಮಾಡಲು ಕೇವಲ ನಾಲ್ಕೇ ಪದಾರ್ಥ ಸಾಕು. ಮಾತ್ರವಲ್ಲದೇ ತುಂಬಾ ಸಿಂಪಲ್ ಕೂಡಾ.  ಸಂಜೆ ವೇಳೆ ಚಹಾಗೆ ಇದು ಒಂದು ಪರ್ಫೆಕ್ಟ್ ಸ್ನ್ಯಾಕ್ಸ್ ಆಗಬಲ್ಲದು. ಇದನ್ನು ಹೇಗೆ ಮಾಡುವುದು ಎಂದು ನೋಡೋಣ. 
Photo Credit : Pixabay

ಈ ತೆಂಗಿನಕಾಯಿ ಬಿಸ್ಕೆಟ್ ಮಾಡಲು ಕೇವಲ ನಾಲ್ಕೇ ಪದಾರ್ಥ ಸಾಕು. ಮಾತ್ರವಲ್ಲದೇ ತುಂಬಾ ಸಿಂಪಲ್ ಕೂಡಾ.  ಸಂಜೆ ವೇಳೆ ಚಹಾಗೆ ಇದು ಒಂದು ಪರ್ಫೆಕ್ಟ್ ಸ್ನ್ಯಾಕ್ಸ್ ಆಗಬಲ್ಲದು. ಇದನ್ನು ಹೇಗೆ ಮಾಡುವುದು ಎಂದು ನೋಡೋಣ.

ಬೇಕಾಗುವ ಪದಾರ್ಥಗಳು:
ಒಣ ತೆಂಗಿನತುರಿ – ಅರ್ಧ ಕಪ್
ಅಡುಗೆ ಸೋಡಾ – ಕಾಲು ಟೀಸ್ಪೂನ್
ಕರಗಿಸಿದ ಬೆಣ್ಣೆ – ಕಾಲು ಕಪ್
ಮೊಟ್ಟೆ – 5
ಉಪ್ಪು – ಕಾಲು ಟೀಸ್ಪೂನ್ (ಐಚ್ಛಿಕ)

ಮಾಡುವ ವಿಧಾನ: ಮೊದಲಿಗೆ ಓವನ್ ಅನ್ನು 350 ಡಿಗ್ರಿ ಪ್ಯಾರಾಹೀಟ್‌ಗೆ ಪೂರ್ವಭಾವಿಯಾಗಿ ಕಾಯಿಸಿಕೊಳ್ಳಿ.

ಒಣ ತೆಂಗಿನ ತುರಿ ಮತ್ತು ಕರಗಿದ ತುಪ್ಪವನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಮೊಟ್ಟೆಗಳನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.

ಹಿಟ್ಟನ್ನು ಸುಮಾರು 3 ಟೀಸ್ಪೂನ್ ಗಾತ್ರದಷ್ಟು ಒಂದೊಂದು ಬಿಸ್ಕೆಟ್ ಆಗುವಂತೆ ಬೇಕಿಂಗ್ ಶೀಟ್‌ನಲ್ಲಿ ಜೋಡಿಸಿಕೊಂಡು ಓವನ್‌ನಲ್ಲಿ ಇರಿಸಿ, ಸುಮಾರು 20 ನಿಮಿಷ ಬೇಯಿಸಿಕೊಳ್ಳಿ. ಬಳಿಕ ಟೂತ್‌ಪಿಕ್ ಬಳಸಿ ಬಿಸ್ಕಿಟ್ ಚೆನ್ನಾಗಿ ಬೆಂದಿದೆಯೇ ಎಂಬುದನ್ನು ಪರಿಶೀಲಿಸಿ. ಬೆಂದಿಲ್ಲವೆಂದಾದರೆ ಮತ್ತೆ 10 ನಿಮಿಷ ಬೇಯಿಸಿಕೊಂಡರೆ ಟೇಸ್ಟಿ ತೆಂಗಿನಕಾಯಿ ಬಿಸ್ಕೆಟ್ ತಯಾರಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು