News Karnataka Kannada
Monday, April 29 2024
ಅಡುಗೆ ಮನೆ

ಬೇಸಿಗೆಗೆ ಬಾರ್ಲಿ ಪಾಯಸ ಆರೋಗ್ಯಕಾರಿ… ಮಾಡುವುದು ಹೇಗೆ?

ಬೇಸಿಗೆಯಲ್ಲಿ ಆರೋಗ್ಯವನ್ನು ತಂಪಾಗಿಟ್ಟುಕೊಳ್ಳುವ ಕೆಲವು ತಿನಿಸುಗಳನ್ನು ಮಾಡಿ ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವ ಜಾಣ್ಮೆ ನಮ್ಮಲ್ಲಿರಬೇಕು. ಹೀಗಾಗಿ ಬಾರ್ಲಿ ಪಾಯಸ ಆರೋಗ್ಯದ ದೃಷ್ಟಿಯಿಂದ ಉತ್ತಮ. ಇದನ್ನು ಸುಲಭವಾಗಿ ಮಾಡಬಹುದಲ್ಲದೆ, ಬೇಸಿಗೆಯಲ್ಲಿ ದೇಹದ ಮೇಲೆ ಆಗುವ ಪರಿಣಾಮವನ್ನು ತಡೆಯಲು ಅನುಕೂಲವಾಗಲಿದೆ. 
Photo Credit : By Author

ಬೇಕಾಗುವ ಪದಾರ್ಥಗಳು: ಬಾರ್ಲಿ- ಒಂದು ಕಪ್, ಹಾಲು- ಒಂದು ಕಪ್, ಬಾದಾಮಿ, ದ್ರಾಕ್ಷಿ, ಗೋಡಂಬಿ- ಸ್ವಲ್ಪ, ಸಕ್ಕರೆ- ಸಿಹಿಗೆ ತಕ್ಕಂತೆ, ಕೇಸರಿ-ಸ್ವಲ್ಪ

ಹೀಗೆ ತಯಾರು ಮಾಡಿ: ಹಿಂದಿನ ದಿನ ರಾತ್ರಿಯೇ ಬಾರ್ಲಿಯನ್ನು ನೆನೆಯಲು ಹಾಕಬೇಕು. ಬೆಳಗ್ಗೆ ಅದನ್ನು ತೆಗೆದು ಚೆನ್ನಾಗಿ   ಬೇಯಿಸಿಕೊಳ್ಳಬೇಕು. ಆ ನಂತರ ಒಂದು ಪಾತ್ರೆಯಲ್ಲಿ ಬೇಯಿಸಿದ ಬಾರ್ಲಿ ಹಾಕಿ ಅದಕ್ಕೆ ಹಾಲು ಹಾಕಬೇಕು. (ತೆಳು ಅಥವಾ ಮಂದ ಹೇಗೆ ಬೇಕೋ ಹಾಗೆ ಹಾಲನ್ನು ಹಾಕಬೇಕು) ನಿಧಾನ ಉರಿಯಲ್ಲಿ ಸೌಟುನಿಂದ ತಿರುಗಿಸುತ್ತಾ ಚೆನ್ನಾಗಿ ಕುದಿಸಬೇಕು. ಬಳಿಕ ಅದಕ್ಕೆ ಗೋಡಂಬಿ ಮತ್ತು ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದು ಹಾಕಬೇಕು. ಆ ನಂತರ ಒಲೆಯಿಂದ ಇಳಿಸಿ ಬಾದಾಮಿ ಚೂರುಗಳನ್ನು ಹಾಗೂ ಹಾಲಿನಲ್ಲಿ ಅದ್ದಿದ ಕೇಸರಿ ಎಳೆಗಳನ್ನು ಅದರ ಮೇಲೆ ಹಾಕಬೇಕು. ಇಷ್ಟು ಮಾಡಿದರೆ ಬಾರ್ಲಿ ಸಿಂಪಲ್ ಪಾಯಸ ಸೇವಿಸಲು ಸಿದ್ದವಾದಂತೆಯೇ…

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು