News Karnataka Kannada
Tuesday, April 23 2024
Cricket
ಮಂಗಳೂರು

ಸ್ಕೂಟರ್ ಮತ್ತು ಮಿನಿ ಟೂರಿಸ್ಟ್ ಬಸ್ ನಡುವೆ ಡಿಕ್ಕಿ: ಓರ್ವ ಸಾವು

ಕಬಕ ಸಮೀಪದ ಪೋಳ್ಯದಲ್ಲಿ ಸ್ಕೂಟರ್ ಮತ್ತು ಮಿನಿ ಟೂರಿಸ್ಟ್ ಬಸ್ ನಡುವೆ ಡಿಕ್ಕಿ ಸಂಭವಿಸಿ ಯಮಹಾ ಎವಿಯೇಟರ್ ಸ್ಕೂಟರ್ ಸವಾರ ಮಾಸ್ಟರ್ ಪ್ಲಾನರಿ ನೌಕರ ಸ್ಥಳದಲ್ಲೇ ಮೃತಪಟ್ಟ ಘಟನೆ ಫೆ.೨೫ರಂದು ರಾತ್ರಿ ನಡೆದಿದೆ.
Photo Credit : News Kannada

ಪುತ್ತೂರು: ಕಬಕ ಸಮೀಪದ ಪೋಳ್ಯದಲ್ಲಿ ಸ್ಕೂಟರ್ ಮತ್ತು ಮಿನಿ ಟೂರಿಸ್ಟ್ ಬಸ್ ನಡುವೆ ಡಿಕ್ಕಿ ಸಂಭವಿಸಿ ಯಮಹಾ ಎವಿಯೇಟರ್ ಸ್ಕೂಟರ್ ಸವಾರ ಮಾಸ್ಟರ್ ಪ್ಲಾನರಿ ನೌಕರ ಸ್ಥಳದಲ್ಲೇ ಮೃತಪಟ್ಟ ಘಟನೆ ಫೆ.೨೫ರಂದು ರಾತ್ರಿ ನಡೆದಿದೆ.

ಸ್ಕೂಟರ್ ಸವಾರ ಮಾಸ್ಟರ್ ಪ್ಲಾನರಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿರುವ ಅಳಕೆಮಜಲು ನಿವಾಸಿ ಕ್ಲೀಪರ್ಡ್ ಮೋರಸ್ ಅಲಿಯಾಸ್ ರಾಜ(೪೫ವ) ಮೃತಪಟ್ಟವರು.

ಸ್ಕೂಟರ್ ಸಹಸವಾರರಾದ ಬಿಹಾರ ಮೂಲದ ಮುರದಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸ್ತವ್ಯ ಹೊಂದಿರುವ ಸುರೇಂದರ್(೨೯ವ) ಮತ್ತು ಸನ್ನೀಫ್(೨೮ವ) ಎಂಬವರು ಗಾಯಗೊಂಡವರಾಗಿದ್ದಾರೆ.

ರಾತ್ರಿ ವೇಳೆ ಇಬ್ಬರು ಕಾರ್ಮಿಕರನ್ನು ಮುರದಲ್ಲಿ ರೂಮ್‌ಗೆ ಬಿಡಲೆಂದು ಸ್ಕೂಟರ್‌ನಲ್ಲಿ ಪುತ್ತೂರು ಕಡೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ರಾಜ ಅವರು ಚಲಾಯಿಸುತ್ತಿದ್ದ ಸ್ಕೂಟರ್ ಕಬಕ ಸಮೀಪದ ಪೋಳ್ಯ ತಿರುವಿನಲ್ಲಿ ತುಲುಪುತ್ತಿದ್ದ ವಿರುದ್ಧ ಧಿಕ್ಕಿನಿಂದ ಮಡಿಕೇರಿಯಿಂದ ಮಂಗಳೂರು ಕಡೆ ಹೋಗುತ್ತಿದ್ದ ಮಿನಿ ಬಸ್ ನಡುವೆ ಡಿಕ್ಕಿ ಸಂಭವಿಸಿದೆ.

ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ರಾಜ ಅವರ ತೊಡೆಯ ಮೇಲೆಯೇ ಬಸ್ ಹರಿದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಕೂಟರ್ ಸಹ ಸವಾರರಾಗಿದ್ದ ಬಿಹಾರ ಮೂಲದ ಸುರೇಂದರ್ (29 ವರ್ಷ) ಅವರ ಎಡ ಕಾಲು ಮುರಿತಕ್ಕೊಳಾಗಿದ್ದು,ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸನ್ನೀ ಕುಮಾರ್ (28ವರ್ಷ)ಎಂಬವರ ಮುಖಕ್ಕೆ ಗಾಯವಾಗಿದೆ. ಗಾಯಾಳು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು