News Karnataka Kannada
Sunday, May 12 2024
ಅಡುಗೆ ಮನೆ

ಸಿಹಿಯಾದ ಅಕ್ಕಿ ಪಾಯಸ ಸುಲಭವಾಗಿ ಮಾಡುವುದು ಹೇಗೆ

How to make sweet rice payasa easy
Photo Credit : News Kannada

ಸಿಹಿ ತಿಂಡಿ ಎಂದಾಗ ಅದನ್ನು ತಯಾರಿಸಲು ಮೂಗು ಮುರಿಯುವವರೇ ಜಾಸ್ತಿ. ಇಲ್ಲಿದೆ ಅಕ್ಕಿ ಪಾಯಸ ಸುಲಭವಾಗಿ ಬೇಗನೇ ತಯಾರಾಗುತ್ತದೆ….

ಬೇಕಾಗುವ ಪದಾರ್ಥಗಳು

  • ಹಾಲು– 1 ಲೀಟರ್
  • ತೊಳೆದು ನೆನೆಸಿದ ಅಕ್ಕಿ – ಅರ್ಧ ಬಟ್ಟಲು
  • ಸಕ್ಕರೆ– ಅರ್ಧ ಬಟ್ಟಲು
  • ಏಲಕ್ಕಿ ಪುಡಿ– ಅರ್ಧ ಚಮಚ
  • ಕೇಸರಿ ದಳಗಳು– ಚಿಟಿಕೆ
  • ಕತ್ತರಿಸಿದ ಬಾದಾಮಿ – 2 ಚಮಚ
  • ಕತ್ತರಿಸಿದ ಪಿಸ್ತಾ – 2 ಚಮಚ

ಮಾಡುವ ವಿಧಾನ: ಒಂದು ಪ್ಯಾನ್‌ನಲ್ಲಿ ಹಾಲನ್ನು ಕಡಿಮೆ ಉರಿಯಲ್ಲಿ ಕುದಿಸಿಕೊಳ್ಳಿ. ತೊಳೆದು ನೆನೆಸಿದ ಅಕ್ಕಿಯನ್ನು ಹಾಲಿಗೆ ಸೇರಿಸಿ, ಅಕ್ಕಿ ಮೃದುವಾಗುವವರೆಗೆ ಮತ್ತು ಹಾಲು ದಪ್ಪವಾಗುವವರೆಗೆ ಬೇಯಿಸಿ. ಹಾಲಿನ ಮಿಶ್ರಣಕ್ಕೆ ಸಕ್ಕರೆ, ಏಲಕ್ಕಿ ಪುಡಿ, ಚಿಟಿಕೆ ಕೇಸರಿ ಸೇರಿಸಿ ಚೆನ್ನಾಗಿ ಬೆರೆಸಿ. ಬಳಿಕ ಉರಿಯನ್ನು ಆಫ್ ಮಾಡಿ, ತಣ್ಣಗಾಗಲು ಬಿಡಿ.

ನಂತರ ಅದನ್ನು ಫ್ರಿಜ್‌ನಲ್ಲಿ 1-2 ಗಂಟೆ ಇಡಿ. ನಂತರ ಬಾದಾಮಿ ಹಾಗೂ ಪಿಸ್ತಾದಿಂದ ಅಲಂಕರಿಸಿದರೆ ರುಚಿಕರವಾದ ಅಕ್ಕಿ ಪಾಯಸ ಸವಿಯಲು ಸಿದ್ಧ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು