ಸೌತೆಕಾಯಿ ಆರೋಗ್ಯಕ್ಕೆ ಉತ್ತಮವಾದದ್ದು, ಸೌತೆಕಾಯಿಂದ ದೋಸೆ ಕೂಡ ಮಾಡಬಹುದು. ಹಾಗೆಯೇ ಸೌತೆಕಾಯಿಯಿಂದ ಸೂಪ್ ಅನ್ನು ತಯಾರಿಸಬಹುದು. ಬನ್ನಿ ನಾವು ಇವತ್ತು ಸೌತೆಕಾಯಿ ಸೂಪ್ ತಯಾರಿಸೋಣ.
ಬೇಕಾಗುವ ಸಾಮಾಗ್ರಿಗಳು :
ಸೌತೆಕಾಯಿ (ತುರಿದ ಹಾಗೂ ಕತ್ತರಿಸಿದ)
ಹಾಲು 1 ಕಪ್
ಬೆಣ್ಣೆ 1 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಪುದೀನಾ 2-3
ಕ್ಯಾಪ್ಸಿಕಂ 1/2 ಕಪ್
ಮೊಸರು 1/2 ಕಪ್
ಕರಿಮೆಣಸು ಚಿಟಿಕೆ
ತಯಾರಿಸುವ ವಿಧಾನ: ಕತ್ತರಿಸಿದ ಸೌತೆಕಾಯಿಯನ್ನು ಒಂದುವರೆ ಲೋಟ ನೀರು ಹಾಕಿ ಚೆನ್ನಾಗಿ ಕುದಿಸಿ. 10 ರಿಂದ 15 ನಿಮಿಷ ಅದನ್ನು ಬೇಯಲು ಬಿಡಿ. ಬೆಂದ ಮೇಲೆ ಅದನ್ನು ತಣಿಸಿ ಮಿಕ್ಸಿಗೆ ಹಾಕಿ. ಇದಕ್ಕೆ ಹಾಲು, ಮೊಸರು ಮತ್ತು ಉಪ್ಪು ಹಾಕಿ ಮಿಕ್ಸಿ ಮಾಡಿ. ಒಂದು ಪ್ಯಾನ್ ಬಿಸಿ ಮಾಡಿ ಅದಕ್ಕೆ ಬೆಣ್ಣೆ ಹಾಕಿ, ನಂತರ ತುರಿದ ಸೌತೆ ಕಾಯಿ, ದೊಣ್ಣೆ ಮೆಣಸಿನ ಕಾಯಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ಈಗ ಅದಕ್ಕೆ ಈಗಾಗಲೆ ಗ್ರೈಂಡ್ ಮಾಡಿದ ಮಿಕ್ಸರ್ ಹಾಕಿ. ಇದನ್ನು ತಣಿದ ನಂತರ ಸರ್ವ್ ಮಾಡಬಹುದು. ಸರ್ವ್ ಮಾಡುವಾಗ ಪೆಪ್ಪರ್ ಮತ್ತು ಪುದೀನಾ ಸೊಪ್ಪು ಹಾಕಿ ಗಾರ್ನಿಶ್ ಮಾಡಿ ಸರ್ವ್ ಮಾಡಿ.