ಬೇಕಾಗುವ ಸಾಮಾಗ್ರಿಗಳು :
ದೋಸೆ ಹಿಟ್ಟು 1 ಬೌಲ್
ಈರುಳ್ಳಿ 1 ಕಪ್
ಚೀಸ್ 2 ಚಮಚ
ಉಪ್ಪು ಸ್ವಲ್ಪ
ಮೆಣಸಿನಕಾಯಿ 2
ಕರಿಮೆಣಸು
ತಯಾರಿಸುವ ವಿಧಾನ :
ಮೊದಲಿಗೆ ಪ್ಯಾನ್ ಸ್ಟೌ ಮೇಲೆ ಇಡಿ. ನಂತರ ಅದಕ್ಕೆ ಚೀಸ್ ಹಾಕಿ. ಚೀಸ್ ಸ್ವಲ್ಪ ಕರಗಿದ ಮೇಲೆ ದೋಸೆ ಹಿಟ್ಟು ಹಾಕಿ ದೋಸೆ ತಯಾರಿಸಿ. ಕೂಡಲೆ ಅದರ ಮೇಲೆ ಈರುಳ್ಳಿ ಮೆಣಸಿನಕಾಯಿ, ಪೆಪ್ಪರ್ ಪೌಡರ್, ಚೀಸ್ ಹಾಕಿ ಚೆನ್ನಾಗಿ ರೋಸ್ಟ್ ಮಾಡಿಕೊಳ್ಳಿ. ರೋಸ್ಟ್ ಆದ ಮೇಲೆ ಪ್ಯಾನ್ನಿಂದ ದೋಸೆ ತೆಗೆದು ಪುದೀನಾ ಚಟ್ನಿ ಜೊತೆ ಬಿಸಿ ಬಿಸಿಯಾಗಿ ಸರ್ವ್ ಮಾಡಿ.