ಊಟ – ತಿಂಡಿ ಎಂದರೆ ಯಾರಿಗಿಷ್ಟ ಇಲ್ಲಾ ಹೇಳಿ. ಅವುಗಳನ್ನು ಡಿಫರೆಂಟ್ ಆಗಿ ಪ್ರೆಸೆಂಟ್ ಮಾಡಿದರೆ ಗ್ರಾಹಕರು ಹೆಚ್ಚು ಬರುತ್ತಾರೆ ಅನ್ನೋ ನಂಬಿಕೆ ಈ ಹೋಟಲ್ ಮಾಲೀಕರದ್ದು. ಅಂತಹದ್ದೇ ಪ್ರಯೋಗವೊಂದನ್ನು ಇದೀಗ ಬೆಂಗಳೂರಿನ ಹೋಟೆಲ್ ವೊಂದು ಪ್ರಯತ್ನ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಡ್ಲಿಯನ್ನು ಐಸ್ ಕ್ರೀಂ ಕಡ್ಡಿಯಲ್ಲಿ ನೀಡುತ್ತಿರುವ ರೆಸ್ಟೋರೆಂಟ್ ಈಗ ಸುದ್ದಿಯಲ್ಲಿದೆ. ಈ ಫೋಟೋವನ್ನು @BrotherToGod ಎನ್ನುವವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಈ ಫೋಟೋದಲ್ಲಿ ಇಡ್ಲಿಯನ್ನು ಐಸ್ ಕ್ರೀಮ್ ಕಡ್ಡಿಯಲ್ಲಿ ಇಡಲಾಗಿದ್ದು, ಜೊತೆಗೆ ಡಿಪ್ ಮಾಡಿಕೊಳ್ಳಲು ಸಾಂಬಾರ್, ಚಟ್ನಿ ಕೂಡ ಕೊಟ್ಟಿದ್ದಾರೆ.
ಈ ವಿಭಿನ್ನ ಐಸ್ ಕ್ರೀಂ ಇಡ್ಲಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಐಸ್ ಕ್ರೀಂ ರೀತಿಯ ಇಡ್ಲಿ ಮಾಡಿರುವವರ ಕ್ರಿಯೇಟಿವಿಟಿ ಗೆ ಹಲವರು ಭೇಷ್ ಅಂದಿದ್ದರೆ. ಮತ್ತೆ ಕೆಲವರು ಐಸ್ ಕ್ರೀಂ ಕಡ್ಡಿ ಬಳಕೆಯಿಂದ ಪರಿಸರಕ್ಕೆ ಹಾನಿಯಾಗಲಿದೆ ಎಂದು ಸಿಟ್ಟಾಗಿದ್ದಾರೆ.