News Karnataka Kannada
Friday, May 10 2024
ಅಡುಗೆ ಮನೆ

ಬಾಯಿ ನಿರೂರಿಸುವ ಚಿಕನ್ ಬಿರಿಯಾನಿ

Photo Credit :

ಬಾಯಿ ನಿರೂರಿಸುವ ಚಿಕನ್ ಬಿರಿಯಾನಿ

ಮಾಂಸಾಹಾರಿಗಳಿಗೆ ತಿನ್ನುವ ಆಯ್ಕೆಯು ಹೆಚ್ಚೇ ಎನ್ನಬಹುದು. ಅದರಲ್ಲೂ ಚಿಕನ್ ಬಿರಿಯಾನಿ ಅಂದ್ರೆ ಎಲ್ಲರಿಗೂ ಇಷ್ಟವಾಗುವುದು ಸಹಜ. ಈ ಚಿಕನ್ ಬಿರಿಯಾನಿಯನ್ನು ಹೇಗೆ ಮಾಡಬಹುದು ಎಂಬುದು ಇಲ್ಲಿದೆ

ಚಿಕನ್ –1 ಕೆಜಿ

ಟೊಮ್ಯಾಟೋ- 2

ಈರುಳ್ಳಿ- 3

ಶುಂಠಿ ಪೇಸ್ಟ್- 25ಗ್ರಾಂ

ಬೆಳ್ಳುಳ್ಳಿ- 25ಗ್ರಾಂ

ಚಕ್ಕೆ-4 ಚೂರು

ಲವಂಗ-4

ಏಲಕ್ಕಿ-6

ಖಾರದಪುಡಿ- 2ಚಮಚ

ಮೆಂತೆ- ಅರ್ಧಕಟ್ಟು

ಪುದಿನಾ- ಅರ್ಧಕಟ್ಟು

ಪಾಲಕ್- ಅರ್ಧಕಟ್ಟು

ಕೊತ್ತಂಬರಿ- ಅರ್ಧಕಟ್ಟು

ಅರಿಶಿನ- 1ಚಮಚ

ಉಪ್ಪು-ರುಚಿಗೆ ತಕ್ಕಂತೆ

ಮಾಡುವುದು ಹೇಗೆ?

ಮೊದಲು ಮಾಂಸವನ್ನು ತೊಳೆದಿಟ್ಟುಕೊಂಡು, ಈರುಳ್ಳಿಯನ್ನು ಹಚ್ಚಿಟ್ಟು, ಸೊಪ್ಪುಗಳನ್ನು ಶುಚಿಮಾಡಿ ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಬೇಕು. ಆ ನಂತರ ಕುಕ್ಕರ್‍ ನಲ್ಲಿ ಎಣ್ಣೆಹಾಕಿ ಅದರಲ್ಲಿ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಹುರಿಯಬೇಕು. ಅದಕ್ಕೆ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಬೇಕು. ಬಳಿಕ ಮಾಂಸವನ್ನು ಹಾಕಬೇಕು. ಅದಾದ ಬಳಿಕ ಚಕ್ಕೆ, ಲವಂಗ, ಏಲಕ್ಕಿ ಹಾಕಿ, ಖಾರದಪುಡಿ ಹಾಕಿ ತಿರುಗಿಸಬೇಕು. ಅದಕ್ಕೆ ಸೊಪ್ಪನ್ನು ಜತೆಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕೊನೆಯಲ್ಲಿ ಅಕ್ಕಿಯನ್ನು ಹಾಕಬೇಕು. ಬಳಿಕ ಅಳತೆಗೆ ತಕ್ಕಷ್ಟು ನೀರು ಹಾಕಿ ಕುಕ್ಕರ್‍ನಲ್ಲಿ ಎರಡು ವಿಶಲ್ ಕೂಗಿಸಿ ತೆಗೆದು ಸೌಟು ಹಾಕಿ ಚೆನ್ನಾಗಿ ಮಿಶ್ರ ಮಾಡಿದರೆ ಚಿಕನ್ ಬಿರಿಯಾನಿ ರೆಡಿ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು