News Karnataka Kannada
Friday, May 17 2024
ಅಡುಗೆ ಮನೆ

ಆರೋಗ್ಯಕ್ಕೆ ಸಹಕಾರಿ ಬಾರ್ಲಿ ಪಾಯಸ

Photo Credit :

ಆರೋಗ್ಯಕ್ಕೆ ಸಹಕಾರಿ ಬಾರ್ಲಿ ಪಾಯಸ

ಬಾರ್ಲಿ ಆರೋಗ್ಯಕ್ಕೆ ಹಲವು ವಿಧದಲ್ಲಿ ಸಹಕಾರಿಯಾಗಿದೆ. ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡಿ ತಂಪಾಗಿಡುತ್ತದೆ. ಜತೆಗೆ ಬೇರೆ ಬೇರೆ ಆರೋಗ್ಯ ಸಂಬಂಧಿತ ತೊಂದರೆಯನ್ನು ನಿವಾರಿಸುವ ಶಕ್ತಿ ಇದಕ್ಕಿದೆ. ಇಂತಹ ಆರೋಗ್ಯ ಗುಣ ಹೊಂದಿರುವ ಬಾರ್ಲಿಯಿಂದ ಪಾಯಸ ಮಾಡಿ ಸೇವಿಸಬಹುದಾಗಿದೆ.

ಬಾರ್ಲಿ ಪಾಯಸಕ್ಕೆ ಬೇಕಾಗುವ ಪದಾರ್ಥಗಳು

ಬಾರ್ಲಿ- ಒಂದು ಕಪ್

ಹಾಲು- ಒಂದು ಕಪ್

ಬಾದಾಮಿ, ದ್ರಾಕ್ಷಿ, ಗೋಡಂಬಿ- ಸ್ವಲ್ಪ

ಸಕ್ಕರೆ- ಸಿಹಿಗೆ ತಕ್ಕಂತೆ

ಕೇಸರಿ-ಸ್ವಲ್ಪ

ಮಾಡುವ ವಿಧಾನ ಹೀಗಿದೆ.

ಬಾರ್ಲಿಯನ್ನು ಹಿಂದಿನ ದಿನ ರಾತ್ರಿಯೇ ನೆನೆಯಲು ಹಾಕಬೇಕು. ಬೆಳಗ್ಗೆ ಅದನ್ನು ತೆಗೆದು ಚೆನ್ನಾಗಿ ಬೇಯಿಸಿಕೊಳ್ಳಬೇಕು. ಆ ನಂತರ ಒಂದು ಪಾತ್ರೆಯಲ್ಲಿ ಬೇಯಿಸಿದ ಬಾರ್ಲಿ ಹಾಕಿ ಅದಕ್ಕೆ ಹಾಲು ಹಾಕಬೇಕು. (ತೆಳು ಅಥವಾ ಮಂದ ಹೇಗೆ ಬೇಕೋ ಹಾಗೆ ಹಾಲನ್ನು ಹಾಕಬೇಕು) ನಿಧಾನ ಉರಿಯಲ್ಲಿ ಸೌಟುನಿಂದ ತಿರುಗಿಸುತ್ತಾ ಚೆನ್ನಾಗಿ ಕುದಿಸಬೇಕು. ಬಳಿಕ ಅದಕ್ಕೆ ಗೋಡಂಬಿ ಮತ್ತು ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದು ಹಾಕಬೇಕು. ಆ ನಂತರ ಒಲೆಯಿಂದ ಇಳಿಸಿ ಬಾದಾಮಿ ಚೂರುಗಳನ್ನು ಹಾಗೂ ಹಾಲಿನಲ್ಲಿ ಅದ್ದಿದ ಕೇಸರಿ ಎಳೆಗಳನ್ನು ಅದರ ಮೇಲೆ ಹಾಕಿ ಅಲಂಕರಿಸಬೇಕು. ಅಲ್ಲಿಗೆ ಬಾರ್ಲಿ ಪಾಯಸ ರೆಡಿಯಾದಂತೆಯೇ…

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು