ಪನ್ನೀರ್ ಎಂದರೆ ಮಕ್ಕಳಿಗೆ ಪಂಚಪ್ರಾಣ. ಪನ್ನೀರಿನಿಂದ ತಯಾರಿಸಿದ ಪ್ರತಿಯೊಂದು ಆಹಾರವು ನಾಲಗೆಗೆ ಹೆಚ್ಚು ರುಚಿಯನ್ನು ನೀಡುತ್ತದೆ. ಬನ್ನಿ ನಾವು ಇವತ್ತು ಪನ್ನೀರ್ ಸೋಯಾ ಬುರ್ಜಿ ತಯಾರಿಸಿ ನೋಡೋಣ.
ಬೇಕಾಗುವ ಪದಾರ್ಥಗಳು
ಪನೀರ್ 1 ಕಪ್
ಸೋಯಾ 1 ಕಪ್
ಈರುಳ್ಳಿ 1/2 ಕಪ್
ಖಾರದ ಪುಡಿ 1 ಚಮಚ
ಎಣ್ಣೆ 2 ಚಮಚ
ನಿಂಬೆಹಣ್ಣಿನ ರಸ 1 ಚಮಚ
ಅರಿಶಿನ 1/4 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಶುಂಠಿ ಪೇಸ್ಟ್ 1 ಚಮಚ
ಜೀರಿಗೆ 1/4 ಚಮಚ
ಸಾಸಿವೆ 1/4 ಚಮಚ
ಈರುಳ್ಳಿ ಸೊಪ್ಪು 1/4 ಚಮಚ
ಗರಂ ಮಸಾಲಾ 1 ಚಮಚ
ಹಸಿಮೆಣಸಿನಕಾಯಿ 2
ಕೊತ್ತಂಬರಿ ಸೊಪ್ಪು 1/4 ಚಮಚ
ತಯಾರಿಸುವ ವಿಧಾನ
ಒಂದು ಪ್ಯಾನ್ನಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ ನಂತರ ಸ್ವಲ್ಪ ಸಾಸಿವೆ, ಒಂಚೂರು ಜೀರಿಗೆ ಹಾಕಿ ಸಿಡಿಸಿ. ಇದಾದ ಬಳಿಕ ಈರುಳ್ಳಿ, ಅರಿಶಿನ, ಜಿಂಜರ್ ಫೇಸ್ಟ್ ಹಾಕಿ ಮಿಕ್ಸ್ ಮಾಡಿ. ನಂತರ ಮೆಣಸಿನಕಾಯಿ ಸ್ವಲ್ಪ ಪನೀರ್ ಹಾಕಿದ ಮೇಲೆ ಸೋಯಾ ಹಾಕಿ ಮಿಕ್ಸ್ ಮಾಡಿ. ಇದನ್ನು ಚೆನ್ನಾಗಿ ಬೇಯಿಸಿದ ನಂತರ ರುಚಿಗೆ ತಕ್ಕಷ್ಟು ಉಪ್ಪು, ಖಾರದ ಪುಡಿ ಹಾಗೂ ಗರಂ ಮಸಾಲಾ ಹಾಕಿಕೊಂಡು ಮಿಕ್ಸ್ ಮಾಡಿ ನಂತರ ಬೇಯಿಸಿ. ಬಳಿಕ ಈರುಳ್ಳಿ ಸೊಪ್ಪು ಹಾಕಿ ಸ್ವಲ್ಪ ಹೊತ್ತು ಬೇಯಿಸಿ ಇದೀಗ ಸ್ಟೌ ಆಫ್ ಮಾಡಿ. ನೀವು ತಯಾರಿಸಿದ ಪನೀರ್ ಸೋಯಾ ಬುರ್ಜಿ ಮೇಲೆ ಸ್ವಲ್ಪ ನಿಂಬೆ ರಸ ಹಿಂಡಿ ಇದಾದ ಬಳಿಕ ಅದರ ಮೇಲೆ ಕೊತ್ತಂಬರಿ ಸೊಪ್ಪು ಹಾಕಿ ಸರ್ವ್ ಮಾಡಿ.