ಬಹುಭಾಷಾ ನಟಿ ಯಾಮಿ ಗೌತಮ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದು, ಮದುವೆಯಾಗಿ ಮೂರು ವರ್ಷಗಳ ಬಳಿಕ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.
ಫೆ.೨೩ರಂದು ತೆರೆಕಾಣಲಿರುವ ‘ಆರ್ಟಿಕಲ್ 370’ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ನಿರ್ದೇಶಕ ಆದಿತ್ಯ ಧಾರ್- ಯಾಮಿ ಜೋಡಿ ಈ ಬಗ್ಗೆ ತಿಳಿಸಿದ್ದು, ಯಾಮಿಗೀಗ ಐದು ತಿಂಗಳು ಎನ್ನಲಾಗಿದೆ.
‘ಉರಿ’ ಸಿನಿಮಾ ವೇಳೆ ಪರಿಚಯವಾದ ಯಾಮಿ ಮತ್ತು ಆದಿತ್ಯ ಎರಡು ವರ್ಷಗಳ ಡೇಟಿಂಗ್ ನ ನಂತರ ೨೦೨೧ರಲ್ಲಿ ಮದುವೆಯಾಗಿದ್ದರು.