News Karnataka Kannada
Thursday, May 02 2024
ಮನರಂಜನೆ

‘ನಾನು ನಕ್ಸಲ್ ಆಗಿದ್ದೆ’ ಎಂದ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ

Agnihotri
Photo Credit : News Kannada

ಮುಂಬೈ: ವಿವೇಕ್ ಅಗ್ನಿಹೋತ್ರಿ ಅವರು ಇತ್ತೀಚೆಗೆ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಅವರ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ಅನೇಕರು ಈ ಚಿತ್ರವನ್ನು ಟೀಕೆ ಮಾಡಿದರು. ಇದು ಬಿಜೆಪಿ ಬೆಂಬಲಿತರಿಂದ ಸಿದ್ಧವಾದ ಸಿನಿಮಾ ಎನ್ನುವ ಮಾತುಗಳು ಕೇಳಿ ಬಂದವು. ಇದಕ್ಕೆಲ್ಲ ವಿವೇಕ್ ಉತ್ತರಿಸಿದ್ದರು. ಆದರೆ, ವಿವೇಕ್ ಮೊದಲು ಈ ರೀತಿ ಇರಲಿಲ್ಲ. ಅವರು ‘ಅರ್ಬನ್ ನಕ್ಸಲ್’ ಹೆಸರಿನ ಪುಸ್ತಕ ಕೂಡ ಬರೆದಿದ್ದರು.

‘ನನ್ನ ಡಿಎನ್​ಎ ತುಂಬಾನೇ ಭಿನ್ನವಾದುದು. ಯಾವುದೇ ಸಂಸ್ಥೆಗಳು ನನ್ನನ್ನು ರೂಪಿಸಲು ಸಾಧ್ಯವಿಲ್ಲ. ನಾನು ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದೆ. ‘ಕುದುರೆ ಒಳಗೆ ಹೋದರೆ ಕುದುರೆ ಹೊರಬರುತ್ತದೆ. ಕತ್ತೆ ಒಳಗೆ ಹೋದರೆ ಕತ್ತೆ ಮಾತ್ರ ಬರಲು ಸಾಧ್ಯ’ ಎಂಬ ಸಾಲು ಅಲ್ಲಿನ ಗೇಟ್​ ಮೇಲೆ ಬರೆದಿತ್ತು. ಒಂದು ಸಂಸ್ಥೆ ವ್ಯಕ್ತಿಯನ್ನು ರೂಪಿಸಲು ಸಾಧ್ಯವಿಲ್ಲ. ಹಾಗಾಗುತ್ತಿದೆ ಎಂದರೆ ಅದು ಸಂಸ್ಥೆಯ ವೈಫಲ್ಯ’ ಎಂದು ವಿವೇಕ್ ಅಗ್ನಿಹೋತ್ರಿ ಅವರು ಫಸ್ಟ್​ಪೋಸ್ಟ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

‘ಜೆಎನ್​​ಯು ವಿಶ್ವವಿದ್ಯಾನಿಲಯದ ಸಮಸ್ಯೆ ಏನೆಂದರೆ ಅವರು ವಿದ್ಯಾರ್ಥಿಗಳ ಬ್ರೇನ್​ವಾಶ್ ಮಾಡುತ್ತಾರೆ. ಇಲ್ಲಿ ಕೆಲ ವಿದ್ಯಾರ್ಥಿಗಳನ್ನು ಹೇಗೆ ರೂಪಿಸಲಾಗುತ್ತದೆ ಎಂದರೆ ಅವರು ಏನೇ ಹೇಳಿದರೂ ವಿರೋಧಿಸುತ್ತಾರೆ. ಕೆಲವೊಮ್ಮೆ ನೀವು ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕಾಗುತ್ತದೆ. ಕೇವಲ ಟೀಕೆ ಮಾಡುತ್ತಿರುವುದರಿಂದ ಸಹಕಾರಿ ಆಗುವುದಿಲ್ಲ. ನಾನು ನಕ್ಸಲ್ ಆಗಿದ್ದೆ, ಎಡಪಂಥೀಯ ಸಿದ್ಧಾಂತಗಳನ್ನು ನಂಬುತ್ತಿದ್ದೆ. ಆದರೆ, ಕೇವಲ ಟೀಕೆ ಮಾಡುತ್ತಿರುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂಬುದು ಗೊತ್ತಾಯಿತು. ಒಂದೊಮ್ಮೆ ಹಾಗೆಯೇ ಇದ್ದರೆ ಸಮಾಜಕ್ಕೆ ನಿಮ್ಮ ಕೊಡುಗೆ ಏನೂ ಇರುವುದಿಲ್ಲ’ ಎಂದಿದ್ದಾರೆ ಅವರು. ಸದ್ಯ ಇದರಲ್ಲಿ ನಾನು ನಕ್ಸಲ್ ಆಗಿದ್ದೆ ಎಂಬ ಮಾತು ಈಗ ಸಾಕಷ್ಟು ಚರ್ಚೆ ಗೆ ಕಾರಣವಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು