Bengaluru 24°C
Ad

ಸ್ಟಾರ್ ನಟಿಯ ಕೈ ಹಿಡಿಯಲಿರೋ ನಿರ್ದೇಶಕ ತರುಣ್ ಸುಧೀರ್

Tarunsudeer

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎಂಬ ಗುಸು ಗುಸು ಗಾಂಧಿನಗರದಲ್ಲಿ ಕೇಳಿ ಬರ್ತಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ನಿರ್ದೇಶನ ಹಾಗೂ ರಿಯಾಲಿಟಿ ಶೋ ತೀರ್ಪುಗಾರರಾಗಿ ಬ್ಯುಸಿಯಾಗಿರೋ ತರುಣ್ ಸುಧೀರ್ ಕೊನೆಗೂ ಮದುವೆಯಾಗೋ ಮನಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ.

ಕನ್ನಡ ಖ್ಯಾತ ನಟಿ ಜೊತೆ ತರುಣ್ ಮದುವೆಯಾಗುತ್ತಿದ್ದಾರೆ ಎನ್ನಲಾಗುತ್ತಿದೆ. ತರುಣ್ ಸುಧೀರ್ ವಯಸ್ಸು 40 ಗಡಿಯಲ್ಲಿದೆ. ತಾಯಿ ಮಾಲತಿ ಕೂಡ ಮಗನಿಗೆ ಮದುವೆ ಮಾಡಬೇಕು ಎನ್ನುತ್ತಿರುತ್ತಾರೆ. ಆದರೆ ಸಿನಿಮಾ ಕೆಲಸಗಳಲ್ಲಿ ಮುಳುಗಿ ಹೋಗಿರುವ ತರುಣ್ ಸದ್ಯಕ್ಕೆ ಮದುವೆ ಆಲೋಚನೆ ಇಲ್ಲ, ಮದುವೆ ಆಗದೇ ನೆಮ್ಮದಿಯಾಗಿ ಇದ್ದೀನಿ ಎಂದು ತಮಾಷೆಯಾಗಿ ಹೇಳುತ್ತಾ ಬರುತ್ತಿದ್ದರು. ಆದರೆ ಇದೀಗ ಮದುವೆ ಫಿಕ್ಸ್ ಆಗಿದ್ದು, ಇನ್ನೆರಡು ತಿಂಗಳಲ್ಲಿ ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ.

ನಿರ್ದೇಶಕ ತರುಣ್ ಸುಧೀರ್ ನಟಿ ಸೋನಾಲ್ ಮಂಥೆರೊ ಕೈ ಹಿಡಿಯುತ್ತಾರೆ ಎನ್ನುವ ಗುಸುಗುಸು ಈಗ ಕೇಳಿಬರ್ತಿದೆ. ತರುಣ್ ನಿರ್ದೇಶನದ ‘ರಾಬರ್ಟ್’ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಜೋಡಿಯಾಗಿ ತನು ಆಗಿ ಸೋನಲ್ ಮಿಂಚಿದ್ದರು. ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಸೋನಲ್ ಮೊದಲಿಗೆ ತುಳು ಸಿನಿಮಾಗಳಲ್ಲಿ ನಟಿಸಿದ್ದರು. ‘ಅಭಿಸಾರಿಕೆ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದರು.

‘ಪಂಚತಂತ್ರ’, ‘ಡೆಮೊ ಪೀಸ್’, ‘ಗರಡಿ’ ಹಾಗೂ ‘ಶುಗರ್ ಫ್ಯಾಕ್ಟರಿ’ ಸಿನಿಮಾಗಳಲ್ಲಿ ಆಕೆ ಕಾಣಿಸಿಕೊಂಡಿದ್ದರು. ಇದೀಗ ತರುಣ್- ಸೋನಲ್ ಮದುವೆ ಆಗುತ್ತಾರೆ ಎನ್ನುವ ಸುದ್ದಿಯನ್ನು ಯಾರು ಹಬ್ಬಿಸಿದರೋ ಗೊತ್ತಿಲ್ಲ. ಆದರೆ ಇಬ್ಬರೂ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆಗಸ್ಟ್ 10ಕ್ಕೆ ಮದುವೆ ಎನ್ನಲಾಗ್ತಿದೆ

Ad
Ad
Nk Channel Final 21 09 2023
Ad