ನಟ ಮಹೇಶ್ ಬಾಬು ಹಾಗೂ ಕೀರ್ತಿ ಸುರೇಶ್ ನಟನೆಯ ಸರ್ಕಾರು ವಾರಿ ಪಾಠ ಚಿತ್ರದ ಹೊಸ ಪೋಸ್ಟರ್ ಇಂದು ಬಿಡುಗಡೆಯಾಗಿದೆ. ಮಹಾಶವರಾತ್ರಿಯ ವಿಶೇಷದಿನದಂತು ಮಾಸ್ ಲುಕ್ ನ ಪೋಸ್ಟರ್ ರಿಲೀಸ್ ಮಾಡಲಾಗಿದೆ.
ಈ ಚಿತ್ರಕ್ಕೆ ಪರಾಸುರಂ ಆಕ್ಷನ್ ಕಟ್ ಹೇಳಿದ್ದು, ನವೀನ್ ಯರ್ನೇನಿ, ವೈ.ರವಿಶಂಕರ್, ರಾಮ್ ಅಚಂತಾ, ಗೋಪಿಚಂದ್ ಅಚಂತಾ ಹೂಡಿಗೆ ಮಾಡಿದ್ದಾರೆ.
ಬರೋಬ್ಬರಿ 60 ಕೋಟಿ ರೂ. ಹೂಡಿಕೆಯಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಎಸ್. ತಮನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ ಚಿತ್ರೀಕರಣವನ್ನು ಹೈದರಾಬಾದ್, ಗೋವಾ, ಸ್ಪೈನ್ ನಲ್ಲಿ ಮಾಡಲಾಗಿದೆ. 2022ರ ಮೇ 12ರಂದು ಚಿತ್ರ ತೆರೆ ಮೇಲೆ ಬರಲಿದೆ.
Wishing you all a happy #MahaShivaratri! May the ever benevolent Lord Shiva bring strength and abundance! Let good conquer all evil! 🙏 pic.twitter.com/PnNeo5HbHE
— Mahesh Babu (@urstrulyMahesh) March 1, 2022