ಹೈದ್ರಾಬಾದ್ : ತೆಲುಗು ಖ್ಯಾತ ನಟ ಸಾಯಿ ಧರ್ಮತೇಜ್ ಶುಕ್ರವಾರ ರಾತ್ರಿ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ತೆಗೆ ದಾಖಲಿಸಲಾಗಿದೆ.
ಸದ್ಯ ಸಾಯಿ ಧರ್ಮ ತೇಜ್ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹೈದರಾಬಾದ್ ನಲ್ಲಿರುವ ಕೇಬಲ್ ಬ್ರಿಜ್ಡ್ ಬಳಿ ಬೈಕ್ ನಲ್ಲಿ ವೇಗವಾಗಿ ಬರುತ್ತಿದ್ದ ಹಿನ್ನೆಲೆಯಲ್ಲಿ ಅಪಘಾತ ಸಂಭವಿಸಿದೆ. ಸ್ಪೋರ್ಟ್ ಬೈಕ್ ನಲ್ಲಿ ಜೋರಾಗಿ ಚಲಿಸುತ್ತಿದ್ದ ಹಿನ್ನೆಲೆಯಲ್ಲೇ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಸಾಯಿ ಧರ್ಮ ತೇಜ್ ಹೆಲ್ಮೆಟ್ ಧರಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜುಬಿಲಿ ಹಿಲ್ಸ್ನ ಅಪೋಲೊ ಆಸ್ಪತ್ರೆಯಲ್ಲಿ ಸಾಯಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರನ್ನು ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಇನ್ನು ಸಾಯಿ ಧರಮ್ ಸಹೋದರ ವೈಷ್ಣವ್ ತೇಜ್, ಚಿಕ್ಕಪ್ಪ ಪವನ್ ಕಲ್ಯಾಣ್, ಸೋದರ ಸಂಬಂಧಿಗಳಾದ ವರುಣ್ ತೇಜ್, ನಿಹಾರಿಕಾ ಕೊನಿಡೆಲಾ ಮತ್ತು ಸ್ನೇಹಿತ ಸಂದೀಪ್ ಕಿಶನ್ ಆಸ್ಪತ್ರೆಗೆ ಭೇಟಿ ನೀಡಿ, ನಟನ ಆರೋಗ್ಯ ವಿಚಾರಿಸಿದ್ದಾರೆ.