ಮಹೇಶ್ ಬಾಬು ಹಾಗೂ ಕೀರ್ತಿ ಸುರೇಶ್ ನಟನೆಯ ‘ಸರ್ಕಾರು ವಾರಿ ಪಾಟ’ ಚಿತ್ರದ ‘ಕಲಾವತಿ.’ ಹಾಡು ರಿಲೀಸ್ ಆಗಿದೆ. ಈ ಸಾಂಗ್ನಲ್ಲಿ ಮಹೇಶ್ ಬಾಬು ಹಾಗೂ ಕೀರ್ತಿ ಸುರೇಶ್ ಕಾಂಬಿನೇಷನ್ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿದೆ. ಈ ಹಾಡು ಈಗ ಕೋಟಿಕೋಟಿ ವೀಕ್ಷಣೆ ಕಾಣುತ್ತಿದೆ. ಅಭಿಮಾನಿಗಳು ವಿಡಿಯೋ ಸಾಂಗ್ ನೋಡಿ ಸಖತ್ ಖುಷಿಪಟ್ಟಿದ್ದಾರೆ.
ಮಹೇಶ್ ಬಾಬು ಹಾಗೂ ಕೀರ್ತಿ ಸುರೇಶ್ ಇದೇ ಮೊದಲ ಬಾರಿಗೆ ಒಂದಾಗಿದ್ದಾರೆ. ಈ ಕಾರಣದಿಂದಲೂ ‘ಸರ್ಕಾರು ವಾರಿ ಪಾಟ’ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಈ ಚಿತ್ರದಲ್ಲಿ ಮಹೇಶ್ ಬಾಬು ಅವರು ಹಿಂದೆಂದೂ ಕಾಣಿಸಿಕೊಳ್ಳದ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಚಿತ್ರದ ‘ಕಲಾವತಿ..’ ಹಾಡು ಸಖತ್ ಟ್ರೆಂಡ್ ಆಗುತ್ತಿದೆ. ಯೂಟ್ಯೂಬ್ನ ಮ್ಯೂಸಿಕ್ ವಿಭಾಗದ ಟ್ರೆಂಡಿಂಗ್ನಲ್ಲಿ ಈ ಹಾಡು ನಂಬರ್ ಒನ್ ಸ್ಥಾನದಲ್ಲಿದೆ.
ಥಮನ್ ಎಸ್. ಅವರು ‘ಸರ್ಕಾರು ವಾರಿ ಪಾಟ’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಹಾಡಿನ ಸಂಗೀತ ಅನೇಕರಿಗೆ ಇಷ್ಟವಾಗಿದೆ. ಸಿದ್ ಶ್ರೀರಾಮ್ ಅವರು ಈ ಹಾಡನ್ನು ಹಾಡಿದ್ದಾರೆ. ಮಹೇಶ್ ಬಾಬು ಡ್ಯಾನ್ಸ್ ಸ್ಟೆಪ್ ಎಲ್ಲರಿಗೂ ಇಷ್ಟವಾಗಿದೆ. ಮಹೇಶ್ ಬಾಬು ಹಾಗೂ ಕೀರ್ತಿ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟವಾಗಿದೆ. ಈ ಚಿತ್ರದ ಹಾಡು ರಿಲೀಸ್ ಆದ ಒಂದೇ ದಿನಕ್ಕೆ 1.4 ಕೋಟಿ ಬಾರಿ ವೀಕ್ಷಣೆ ಕಂಡಿದೆ. 80 ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋ ಲೈಕ್ ಮಾಡಿದ್ದಾರೆ. ಈ ಹಾಡಿಗೆ ಬರೋಬ್ಬರಿ 90 ಸಾವಿರ ಕಮೆಂಟ್ಗಳು ಬಂದಿರೋದು ವಿಶೇಷ. ಕೀರ್ತಿ ಸುರೇಶ್ ಅವರು ‘ಮಹಾನಟಿ’ ಚಿತ್ರದ ಮೂಲಕ ಸಾಕಷ್ಟು ಖ್ಯಾತಿ ಗಳಿಸಿಕೊಂಡವರು. ಆದರೆ, ಆ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿದರೂ ಯಶಸ್ಸು ಸಿಗಲಿಲ್ಲ. ಈಗ ಈ ಸಿನಿಮಾ ಮೂಲಕ ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿ ಅವರಿದ್ದಾರೆ.
ಹಾಡಿನ ಮೂಲಕ ಸಿನಿಮಾ ಹಿಟ್ ಆದ ಉದಾಹರಣೆ ಸಾಕಷ್ಟಿದೆ. ಈಗ ‘ಕಲಾವತಿ..’ಹಾಡಿನಿಂದ ‘ಸರ್ಕಾರು ವಾರಿ ಪಾಟ’ ಚಿತ್ರದ ಮೈಲೇಜ್ ಹೆಚ್ಚಿದರೂ ಅಚ್ಚರಿ ಏನಿಲ್ಲ. ಮೇ 12ರಂದು ಈ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಮಹೇಶ್ ಬಾಬು ಅಭಿಮಾನಿಗಳು ಈ ಚಿತ್ರದ ಬಿಡುಗಡೆಗಾಗಿ ಕಾದು ಕೂತಿದ್ದಾರೆ. ಇದರ ಜತೆಗೆ ತ್ರಿವಿಕ್ರಂ ಶ್ರೀನಿವಾಸ್ ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರದಲ್ಲೂ ಮಹೇಶ್ ಬಾಬು ನಟಿಸುತ್ತಿದ್ದಾರೆ. ಈ ಸಿನಿಮಾದ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿದ್ದು, ಶೀಘ್ರವೇ ಸೆಟ್ಟೇರುವ ಸಾಧ್ಯತೆ ಇದೆ.
Super 🌟 @urstrulyMahesh continues his supremacy😎#KalaavathiMusicVideo is now the MOST VIEWED South Indian song and MOST LIKED Tollywood song in 24hrs❤️🔥
▶️ https://t.co/fVmmhK2hAC#SarkaruVaariPaata#SVPOnMay12@KeerthyOfficial @ParasuramPetla @MusicThaman @saregamasouth pic.twitter.com/jR3bu50j4G
— Mythri Movie Makers (@MythriOfficial) February 14, 2022