News Karnataka Kannada
Monday, April 29 2024
ತೆಲುಗು

ದಾಖಲೆ ಬರೆದ ಸಾಯಿ ಪಲ್ಲವಿಯ ‘ಲವ್ ಸ್ಟೋರಿ’ ಸಿನಿಮಾ

Sai Pallavi
Photo Credit :
ಬೆಂಗಳೂರು : ನಾಗ ಚೈತನ್ಯ  ಹಾಗೂ ಸಾಯಿ ಪಲ್ಲವಿ  ಕಾಂಬಿನೇಷನ್‌ನಲ್ಲಿ ಮೂಡಿ ಬಂದ ಸಿಂಪಲ್ ಸಿನಿಮಾ ‘ಲವ್‌ ಸ್ಟೋರಿ’  ಚಿತ್ರ ಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸೆಪ್ಟೆಂಬರ್ ರಂದು ಬಿಡುಗಡೆಯಾದ ಈ ಸಿನಿಮಾ ಕೇವಲ ಮೂರು ದಿನಗಳಲ್ಲಿಯೇ ಬಾಕ್ಸ್‌ ಆಫೀಸ್‌ನಲ್ಲಿ  ಸದ್ದು ಮಾಡುವಷ್ಟು ಗಳಿಕೆ ಮಾಡಿದೆ. ಕೊರೋನಾ ಲಾಕ್‌ಡೌನ್‌ ನಂತರ ಕಲೆಕ್ಷನ್‌ ಗಗನ ಮುಟ್ಟಿಸುತ್ತಿರುವ ಸಿನಿಮಾ ಲವ್‌ ಸ್ಟೋರಿ. ಈ ಚಿತ್ರ ಪಡೆಯುತ್ತಿರುವ ಪ್ರಶಂಸೆ ಹಾಗೂ ಜನರನ್ನು ನೋಡಿ ಮುಂಬರುವ ದಿನಗಳಲ್ಲಿ ಯಾವ ಸಿನಿಮಾ ರಿಲೀಸ್ ಆಗಬೇಕು ಎಂದು ನಿರ್ಮಾಪಕರು ಆಗಲೇ ಪ್ಲಾನ್ ಶುರು ಮಾಡಿದ್ದಾರೆ.

ವಿದೇಶದಲ್ಲಿ ಆಗಲೇ 1 ಮಿಲಿಯನ್ ಡಾಲರ್ ಲೆ ಮಾ ಡಿರುವ ಲವ್‌ ಸ್ಟೋರಿ ಸಿನಿಮಾ ಆಂಧ್ರ ಪ್ರದೇಶ (ಮತ್ತು ತೆಲಂಗಾಣದಲ್ಲಿ 18 ಕೋಟಿ ರೂ. ಗಳಿಸಿದೆ. ಮೂರು ದಿನಗಳೂ ಚಿತ್ರ ಮಂದಿರಗಳು ಹೌಸ್‌ ಫುಲ್ ಆಗಿವೆ.

ಆಂಧ್ರ ಮತ್ತು ತೆಲಂಗಾಣದಲ್ಲಿ 700 ಸ್ಕ್ರೀನ್‌ ಹಾಗೂ ವರ್ಲ್ಡ್‌ ವೈಡ್‌ನಲ್ಲಿ 1000ಕ್ಕೂ ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆ ಆಗಿದೆ. ಇನ್ನು ಪ್ರಿ-ರಿಲೀಸ್ ಕಾರ್ಯಕ್ರಮ ಹಾಗೂ ಬ್ಯುಸಿನೆಸ್‌ನಲ್ಲಿ ಚಿತ್ರತಂಡ 26 ಕೋಟಿ ಬಾಚಿಕೊಂಡಿದೆ. ಈ ಚಿತ್ರದ ಕಲೆಕ್ಷನ್ 54 ಕೋಟಿ ರೂ.  ಮುಟ್ಟಿದೆ ಅಂದ್ಮೇಲೆ ಸಿನಿಮಾ ಸೂಪರ್ ಹಿಟ್ ಆಗುವುದರಲ್ಲಿ ಅನುಮಾನವಿಲ್ಲ. ಏಕೆಂದರೆ ಸ್ಯಾಟಿಲೈಟ್  ಹಾಗೂ ಡಿಜಿಟಲ್ ಮಾರಾಟದ ಮೊತ್ತ ಇನ್ನು ತಿಳಿದು ಬಂದಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು