Bengaluru 28°C
Ad

ರೇಣುಕಾ ಸ್ವಾಮಿ ನಂಗೂ ಕೆಟ್ಟದಾಗಿ ಮೆಸೇಜ್ ಮಾಡಿದ್ದ : ಸೋನು ಗೌಡ ಹೊಸ ಟ್ವಿಸ್ಟ್‌

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಒಟಿಟಿ ಸೀಸನ್ 1ರಲ್ಲಿ ಒಬ್ಬರಾಗಿದ್ದ ರೀಲ್ಸ್‌ ರಾಣಿ ಸೋನುಗೌಡ ಅವರು ಕೊಲೆಯಾಗಿರುವ ರೇಣುಕಾ ಸ್ವಾಮಿ ನಂಗೂ ಕೆಟ್ಟದಾಗಿ ಮೆಸೇಜ್‌ ಮಾಡಿದ್ದ ಎಂದು ಹೇಳಿದ್ದಾರೆ.

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಒಟಿಟಿ ಸೀಸನ್ 1ರಲ್ಲಿ ಒಬ್ಬರಾಗಿದ್ದ ರೀಲ್ಸ್‌ ರಾಣಿ ಸೋನುಗೌಡ ಅವರು ಕೊಲೆಯಾಗಿರುವ ರೇಣುಕಾ ಸ್ವಾಮಿ ನಂಗೂ ಕೆಟ್ಟದಾಗಿ ಮೆಸೇಜ್‌ ಮಾಡಿದ್ದ ಎಂದು ಹೇಳಿದ್ದಾರೆ.

ಸದ್ಯ ರೇಣುಕಾ ಸ್ವಾಮಿ ಕೊಲೆ ಕೇಸ್‌ನ್ಲಲಿ ದರ್ಶನ್‌ ಮತ್ತು ಪವಿತ್ರಾ ಗೌಡ ಸೇರಿ ಒಟ್ಟು 17 ಮಂದಿ ಜೈಲು ಪಾಲಾಗಿದ್ದಾರೆ. ಈ ವಿಚಾರ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ನಿನ್ನೆ ಬಿಗ್‌ಬಾಸ್ ಖ್ಯಾತಿಯ ನಟಿ ಚಿತ್ರಾಲ್ ರಂಗಸ್ವಾಮಿ ಕೂಡ ತಮಗೂ ಈ ಅಕೌಂಟ್‌ನಿಂದ ಕೆಟ್ಟ ಮೆಸೇಜ್ ಬಂದಿತ್ತು ಎಂದು ಆರೋಪಿಸಿದ್ದರು. ಇದೀಗ ಇವರ ಬೆನ್ನಲ್ಲೇ ಸೋನು ಗೌಡ ಕೂಡ ಆಕೆಗೆ ಬಂದಿರುವ ಮೆಸೇಜ್‌ ಕುರಿತು ಹೇಳಿಕೊಂಡಿದ್ದಾರೆ.

ಇದೇ ವಿಚಾರವಾಗಿ ಮಾತಾಡಿದ ಸೋನು ಗೌಡ, ಯ್ಯೂಟೂಬ್​ನಲ್ಲಿ ನಾನು ಒಂದು ವಿಡಿಯೋ ನೋಡಿದೆ. ಅದೇ ಅಕೌಂಟ್​ನಿಂದ ಸಾಕಷ್ಟು ಹುಡುಗಿಯರಿಗೆ ಈತ ಕೆಟ್ಟ ಕೆಟ್ಟದಾಗಿ ಮೆಸೇಜ್​ ಮಾಡಿದ್ದ. ಹಾಗಾಗಿ ನಾನೂ ನನ್ನ ಫೋನ್​ನಲ್ಲಿ ಚೆಕ್​ ಮಾಡಿದೆ. ಆತ ನನಗೂ ಕೆಟ್ಟದಾಗಿ ಮೆಸೇಜ್‌ ಮಾಡಿದ್ದ, ಹಾಗಂತ ಅವರ ಕುಟುಂಬವನ್ನು ನಾನು ದೂರುತ್ತಿಲ್ಲ. ಈ ರೀತಿ ಅವರ ಮನೆ ಹೆಣ್ಣುಮಕ್ಕಳಿಗೂ ಆಗಿದ್ದರೆ ಹೇಗಿರುತ್ತಿತ್ತು ಎಂದು ಪ್ರಶ್ನಿಸಿದ್ದಾರೆ.

Ad
Ad
Nk Channel Final 21 09 2023
Ad