ಮುಂಬೈ: ನಟ ಸಿದ್ಧಾರ್ಥ್ ಅವರು ನಟ ಶರ್ವಾನಂದ್ ಅವರ ಮದುವೆಯ ವೇದಿಕೆಯ ಮೇಲೆ ‘ಓಯೇ ಓಯೇ’ ಹಾಡನ್ನು ಹಾಡುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ.
ನಟನ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ತಮ್ಮ 2009 ರ ತೆಲುಗು ಚಲನಚಿತ್ರ ‘ಓಯೆ ಓಯೆ ಓಯೆ’ ಯ ಹಾಡು ಹಾಡುತ್ತಿರುವುದನ್ನು ಗಮನಿಸಬಹುದು. ಬಿಳಿ ಸೂಟ್ನಲ್ಲಿ ಕಾಣಿಸಿಕೊಂಡಿರುವ ನಟ, ಹಾಡು ಹಾಡಿದ ವೇಳೆ ಆತನಿಗೆ ಹೂಂ, ಶಿಳ್ಳೆ ಮತ್ತು ಹುರಿದುಂಬಿಸುತ್ತಿರುವ ಪ್ರೇಕ್ಷಕರ ಗುಂಪು ಕಂಡುಬರುತ್ತದೆ. ಕಳೆದ ವರ್ಷ ತಮ್ಮ ‘ಮಹಾ ಸಮುದ್ರಂ’ ಚಿತ್ರದ ಸೆಟ್ನಲ್ಲಿ ಕೆಲಸ ಮಾಡಿದ ನಂತರ ಸಿದ್ಧಾರ್ಥ್ ಮತ್ತು ಶರ್ವಾನಂದ್ ಉತ್ತಮ ಸ್ನೇಹಿತರಾದರು. ‘ಟಕ್ಕರ್’ ಮತ್ತು ‘ಇಂಡಿಯನ್ 2’ ನಲ್ಲಿ ಸಿದ್ದಾರ್ಥ್ ಕಾಣಿಸಿಕೊಳ್ಳಲಿದ್ದಾರೆ.
ಮುಂಬೈ: ಮದುವೆ ಕಾರ್ಯಕ್ರಮದಲ್ಲಿ ಹಾಡು ಹಾಡಿ ಮನಸೆಳೆದ ನಟ ಸಿದ್ಧಾರ್ಥ್
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.