ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಸೆಪ್ಟೆಂಬರ್ 1ರಂದು ರಿಲೀಸ್ ಆಗಲಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ‘777 ಚಾರ್ಲಿ’ ಬಳಿಕ ರಿಲೀಸ್ ಆಗುತ್ತಿರುವ ರಕ್ಷಿತ್ ನಟನೆಯ ಸಿನಿಮಾ ಇದು ಎಂಬ ಕಾರಣದಿಂದಲೂ ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರದ ಪ್ರಮೋಷನ್ ಆರಂಭ ಆಗಿದೆ. ಈ ಸಿನಿಮಾದ ಹೋರಾಟ..’ ಹೆಸರಿನ ಮೊದಲ ಸಾಂಗ್ ಇಂದು ರಿಲೀಸ್ ಆಗಿದೆ. ಈ ಹಾಡು ಕೇಳುಗರಿಗೆ ಇಷ್ಟ ಆಗಿದೆ.
‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಎರಡು ಭಾಗದಲ್ಲಿ ರಿಲೀಸ್ ಆಗುತ್ತಿದೆ. ಮೊದಲ ಭಾಗಕ್ಕೆ ‘ಸೈಡ್ ಎ’ ಎಂದು ಹೆಸರು ಇಡಲಾಗಿದೆ. ಎರಡನೇ ಪಾರ್ಟ್ಗೆ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಎಂದು ಕರೆಯಲಾಗಿದೆ. ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಜೊತೆ ರುಕ್ಮಿಣಿ ವಸಂತ್, ಚೈತ್ರಾ ಆಚಾರ್, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್, ರಮೇಶ್ ಇಂದಿರಾ, ಗೋಪಾಲ್ ಕೃಷ್ಣ ದೇಶಪಾಂಡೆ ಮೊದಲಾದವರು ನಟಿಸಿದ್ದಾರೆ.