ಮುಂಬೈ: ‘ದಿ ಎಲಿಫೆಂಟ್ ವಿಸ್ಪರರ್ಸ್’ ನಿರ್ದೇಶಕ ಕಾರ್ತಿಕಿ ಗೊನ್ಸಾಲ್ವಿಸ್ ಅವರು ತಮ್ಮ ಸಾಕ್ಷ್ಯಚಿತ್ರದಲ್ಲಿರುವ ಆನೆಗಳಾದ ಆನೆಗಳಾದ ಬೊಮ್ಮಿ ಮತ್ತು ರಘು ಸೇರಿದಂತೆ ಸಂಪೂರ್ಣ ಪಾತ್ರವರ್ಗದ ಚಿತ್ರವನ್ನುಆಸ್ಕರ್ ಪ್ರಶಸ್ತಿಯೊಂದಿಗೆ ಪೋಸ್ಟ್ ಮಾಡಿದ್ದಾರೆ.
ಇನ್ ಸ್ಟಾಗ್ರಾಂನಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದು, ಆರು ವರ್ಷಗಳ ನಂತರ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಚಿತ್ರತಂಡವು ಮತ್ತೆ ಹಳೆಯ ನೆನಪುಗಳೊಂದಿಗೆ ಮತ್ತೆ ಒಗ್ಗೂಡಿದೆ ಎಂದು ನೆನಪು ಮಾಡಿಕೊಂಡಿದ್ದಾರೆ.
ಫೋಟೋದಲ್ಲಿ ಆಸ್ಕರ್ ಟ್ರೋಫಿಯನ್ನು ಕಾರ್ತಿಕಿ ಹಿಡಿದಿದ್ದು ರಘು ಮತ್ತು ಬೊಮ್ಮಿ ಆನೆಗಳ ಮುಂದೆ ನಿಂತಿದ್ದಾರೆ. ‘ದಿ ಎಲಿಫೆಂಟ್ ವಿಸ್ಪರರ್ಸ್’ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರಕ್ಕಾಗಿ 95 ನೇ ಆಸ್ಕರ್ ಪ್ರಶಸ್ತಿ ಪಡೆದಿದೆ. ಬೊಮ್ಮನ್ ಮತ್ತು ಬೆಳ್ಳಿ ಎಂಬ ಮಾವುತ ದಂಪತಿ ಬೇಟೆಗಾರರಿಂದ ರಘು ಎಂಬ ಅನಾಥ ಮರಿ ಆನೆ ರಕ್ಷಿಸುವ ಕಥಾಹಂದರ ಹೊಂದಿದೆ.