‘ಗಿಲ್ಲಿ’ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ರಕುಲ್ ಪ್ರೀತ್ ಸಿಂಗ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್ ನಟ ಹಾಗೂ ನಿರ್ಮಾಪಕ ಜಾಕಿ ಭಗ್ನಾನಿ ಕೈ ಹಿಡಿದಿರುವ ಇವರು, ಗೋವಾದ ಪ್ರತಿಷ್ಠಿತ ಐಟಿಸಿ ಗ್ರ್ಯಾಂಡ್ನಲ್ಲಿ ಮದುವೆಯಾಗಿದ್ದಾರೆ.
ಒಂದು ವಾರದಿಂದ ನಡೆಯುತ್ತಿರುವ ಅದ್ದೂರಿ ಮದುವೆಯಲ್ಲಿ ಆಪ್ತರು, ಸ್ನೇಹಿತರು, ಕುಟುಂಬಸ್ಥರು ಹಾಗೂ ಬಾಲಿವುಡ್ನ ಗಣ್ಯರು ಭಾಗವಹಿಸಿದ್ದರು.
ಇವರ ಮದುವೆಗೆ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಅನನ್ಯ ಪಾಂಡೇ, ಆದಿತ್ಯ ರಾಯ್ ಕಪೂರ್, ಭೂಮಿ ಪಡ್ನೇಕರ್, ವರುಣ್ ಧವನ್ ಸೇರಿದಂತೆ ಹಲವು ಬಾಲಿವುಡ್ ಗಣ್ಯರು ಗೋವಾಗೆ ಹೋಗಿದ್ದಾರೆ.
ವಧು-ವರರ ಉಡುಪನ್ನು ತರುಣ್ ತಹಿಲಿಯಾನಿ ಡಿಸೈನ್ ಮಾಡಿದ್ದಾರೆ.