ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಮತ್ತು ಬಾಹುಬಲಿ ಖ್ಯಾತಿಯ ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ಇಂದು ರಿಲೀಸ್ ಆಗಿದೆ. ಪ್ರೇಕ್ಷಕ ಮಹಾಪ್ರಭುಗಳ ಮನಗೆದ್ದಿರುವ ಈ ಸಿನಿಮಾವನ್ನು ಸಕ್ಸಸ್ನತ್ತ ಮುನ್ನುಗ್ಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಮೊದಲ ದಿನ 48 ಕೋಟಿಯಷ್ಟು ಅಂದಾಜು ಕಲೆಕ್ಷನ್ ಮಾಡಲಿದೆ ಎಂದು ಹೇಳಲಾಗುತ್ತಿದೆ.
ಪ್ರಭಾಸ್ ಫ್ಯಾನ್ಸ್ಗಳಂತು ಸಲಾರ್ ಸಿನಿಮಾ ಕಂಡು ಸಂತಸಗೊಂಡಿದ್ದಾರೆ. ನಟನನ್ನು ವಿಭಿನ್ನ ಗೆಟಪ್ನಲ್ಲಿ ಕಂಡು ಕೊಂಡಾಡಿದ್ದಾರೆ. ಅಂದಹಾಗೆಯೇ ಈ ಸಿನಿಮಾ ಕೆಜಿಎಫ್ ಸಿನಿಮಾಗಿಂತಲೂ ನಿರೀಕ್ಷೆಯನ್ನು ಮೀರಿಸಿದೆ. ಹೀಗಾಗಿ ಥೀಯೆಟರ್ ಹೌಸ್ ಫುಲ್ ಆಗಿದೆ.
ಇನ್ನು ಬುಕ್ ಮೈ ಶೋ ಹಂಚಿಕೊಂಡ ಮಾಹಿತಿ ಪ್ರಕಾರ, ಕಳೆದ 1 ಗಂಟೆಯಲ್ಲಿ ಬುಕ್ ಮೈ ಶೋ 50 ಸಾವಿರ ಟಿಕೆಟ್ಗಳು ಮಾರಾಟವಾಗಿದೆ ಎಂಬ ಮಾಹಿತಿ ಹಂಚಿಕೊಂಡಿದೆ.
ಇನ್ನು ಇತ್ತ ಇದೇ ಸಂದರ್ಭದಲ್ಲಿ ಅನಾಹುತವೊಂದು ಸಂಭವಿಸಿದೆ. ಶ್ರೀ ಸತ್ಯಸಾಯಿ ಜಿಲ್ಲೆಯ ಧರ್ಮಾವರಂ ಪಟ್ಟಣದಲ್ಲಿ ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ಬಿಡುಗಡೆ ವೇಳೆ ವಿದ್ಯುತ್ ಶಾಕ್ ತಗುಲಿ ಅಭಿಮಾನಿಯೊಬ್ಬರು ಸಾವನ್ನಪ್ಪಿದ್ದಾರೆ. ಗುರುವಾರ (ಡಿ.21) ಪಟ್ಟಣದ ರಂಗ ಥಿಯೇಟರ್ ಮುಂಭಾಗದ ಮನೆಯೊಂದರಲ್ಲಿ ಫ್ಲೆಕ್ಸ್ ತೊಳೆಯುತ್ತಿದ್ದಾಗ ನಾಯಕ ಪ್ರಭಾಸ್ಅಭಿಮಾನಿ ಬಾಲರಾಜು (27) ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ಬಾಲರಾಜು ಅವರು ತಮ್ಮ ನೆಚ್ಚಿನ ನಟ ಪ್ರಭಾಸ್ ಅಭಿನಯದ ‘ಸಲಾರ್’ ಚಿತ್ರ ನೋಡಲು ಕಾದಿದ್ದರು. ಅವರ ಸ್ನೇಹಿತರು ಫ್ಲೆಕ್ಸ್ ಫ್ರೇಮ್ ಮಾಡಿ ತೊಳೆದಾಗ ಫ್ರೇಮ್ನ ಕಬ್ಬಿಣದ ರಾಡ್ ಮನೆಯ ವಿದ್ಯುತ್ ವೈರ್ಗಳಿಗೆ ತಗುಲಿದಾಗ ಅವಘಡ ಸಂಭವಿಸಿದೆ.